ರಾಯಬಾಗ ಪೊಲೀಸರ ಭರ್ಜರಿ ಕಾರ್ಯಾಚರಣೆ: 89 ಕೆಜಿ 32 ಗ್ರಾಂ ಗಾಂಜಾ ವಶ 

 ಬಾವನಸೌಂದತ್ತಿ :

    ರಾಯಬಾಗ ತಾಲ್ಲೂಕಿನ ನಂದಿಕುರಳಿ ಗ್ರಾಮ ವ್ಯಾಪ್ತಿಯ ಹೊಲವೊಂದರಲ್ಲಿ ಗಾಂಜಾ ಬೆಳೆದಿದ್ದ ಓರ್ವ ಆರೋಪಿಯನ್ನು ಬಂಧಿಸಿ 89.32ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

   ಖಚಿತ ಮಾಹಿತಿ ಆಧರಿಸಿ ರಾಯಬಾಗ ಪೊಲೀಸರು ಕಾರ್ಯಾಚರಣೆ ನಡೆಸಿ 9ಕೆಜಿ ಒಣ ಗಾಂಜಾ ಹಾಗೂ 79.720ಗ್ರಾಂ ಹಸಿ ಗಾಂಜಾ ವಶಪಡಿಸಿಕೊಂಡು ಕಂಚಕರವಾಡಿಯ ರಾಯಪ್ಪ ಸತ್ಯಪ್ಪ ತೋಳೆ (35) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ತನ್ನ ಪಾಲಿನಿಂದ ಮಾಡಿದ ಜಮೀನಿನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಕಬ್ಬಿನ ಬೆಳೆಯಲ್ಲಿ ಅನಧಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ಧ ಎಂದು ಪೋಲಿಸರು ತಿಳಿಸಿದ್ದಾರೆ.

   ಬೆಳಗಾವಿ ಜಿಲ್ಲಾ ಎಸ್ಪಿ ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿಗಳಾದ ಆರ್ ಬಿ ಬಸರಗಿ ಹಾಗೂ ಶೃತಿ ಇವರ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೂಳ್ಳಿ ಇವರ ನೇತೃತ್ವದಲ್ಲಿ, ಸಿಪಿಐ ಬಿ. ಎಸ್. ಮಂಟೂರ, ಪಿಎಸ್ಐಗಳಾದ ಶಿವಶಂಕರ ಮುಕರಿ, ಜೆ ಡಿ ನರಸಿಂಹರಾಜು, ಎಸ್ ಎಸ್ ಸಾಸನೂರ, ಆರ್. ಬಿ. ಖಾನಾಪೂರೆ, ಸಿ. ಬಿ. ಪಾಟೀಲ, ವಿಠ್ಠಲ ಹೊರಟ್ಟಿ, ಸಿದ್ಧಾರೂಢ ಅರಭಾವಿ, ಎಂ.ಎಂ.ರಾಜಮನಿ, ಬಸವಂತ ಕಾಂಬಳೆ ಹಾಗೂ ಇನ್ನಿತರ ಪೋಲಿಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap