ವಾಷಿಂಗ್ಟನ್ :
ಸದ್ಯ ಕಾಶ್ಮೀರದಲ್ಲಿ ಇರುವ ವಾಸ್ತವ ಸ್ಥಿತಿ ಅರಿಯಲು ತಮ್ಮ ಭೇಟಿಗೆ ಭಾರತೀಯ ಸರ್ಕಾರದಿಂದ ಪ್ರವೇಶ ನಿರಾಕರಿಸಲಾಗಿದೆ ಎಂದು ಡೆಮಾಕ್ರಟಿಕ್ ಪಕ್ಷದ ಅಮೆರಿಕಾದ ಸೆನೆಟರ್ ತಿಳಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿಯಲು ಕಾಶ್ಮೀರಕ್ಕೆ ಭೇಟಿ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಇದಕ್ಕೆ ಭಾರತೀಯ ಸರ್ಕಾರದಿಂದ ಅನುಮತಿ ದೊರೆಯಲಿಲ್ಲ, ಕಾಶ್ಮೀರ ಭೇಟಿಗೆ ಇದು ಸೂಕ್ತ ಸಮಯವಲ್ಲ ಎಂದು ಭಾರತ ಸರ್ಕಾರದಿಂದ ತಿಳಿಸಲಾಗಿದೆ ಎಂದು ಅಮೆರಿಕಾದ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ತಿಳಿಸಿದ್ದಾರೆ.
ನನ್ನ ಭಾರತ ಕಾಶ್ಮೀರ ಪ್ರವೇಶಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ ಎಂದು ಅವರು ಆರೋಪಿಸಿದ್ದಾರೆ.ನೀವು ಯಾವುದನ್ನೂ ಬಚ್ಚಿಡುತ್ತಿಲ್ಲ ಎನ್ನುವುದಾದರೆ ಭಯವೇಕೆ? ಕಾಶ್ಮೀರ ಭೇಟಿಗೆ ಅವಕಾಶ ನೀಡಿ ಎಂದು ಸವಾಲೆಸೆದಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
