ಕೊರಟಗೆರೆ :
ಪಟ್ಟಣದ ಮನೆ ಆವರಣದ ಗುಡ್ಡದಲ್ಲಿ ಬೆಳೆದಿದ್ದ 3ಲಕ್ಷ ಮೌಲ್ಯದ 8 ಕೆಜಿಯಷ್ಟು ಗಾಂಜಾ ಸೊಪ್ಪಿನ 6 ಗಿಡಗಳನ್ನು ಖಚಿತ ಮಾಹಿತಿ ಆಧರಿಸಿ ಕೊರಟಗೆರೆ ಸಿಪಿಐ ನಧಾಪ್ ಮತ್ತು ಪಿಎಸೈ ಮುತ್ತುರಾಜು ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದು, ಪ್ರಕರಣದ ಆರೋಪಿಯನ್ನು ಬಂಧಿಸಿದೆ.
ಶುಕ್ರವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ಪಟ್ಟಣದ 14ನೇ ವಾರ್ಡಿನ ಬೋವಿ ಕಾಲೋನಿಯ ವಾಸಿಯಾದ ಗುಂಡಪ್ಪನ ಮಗನಾದಜಯಣ್ಣ(35) ಬಂಧಿಸಲಾಗಿದ್ದು, ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿಯೇ ರಾಜಾರೋಷವಾಗಿ ಬೆಳೆಯಲಾಗಿತ್ತು. ಕಳೆದ 6 ತಿಂಗಳಿಂದ ಬೆಳೆಸಿದ್ದ 6 ಗಾಂಜಾ ಗಿಡಗಳು ಬೆಳೆದು ಹೂ-ಬೀಜಗಳು ಬಿಟ್ಟು ಸುಂದರವಾಗಿ ಹರಡಿದ್ದವು.
ಪೊಲೀಸರ ತಂಡ ಮತ್ತು ಅಬಕಾರಿ ಇಲಾಖೆ ಗಾಂಜಾ ಗಿಡಗಳ ಉತ್ಪಾದನೆಯ ಜೊತೆ ಮಾರಾಟದ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸಿ ಐದಾರು ಕಡೆ ತಪಾಸಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ದಾಳಿಯ ವೇಳೆ ಪೊಲೀಸರಾದ ಮಂಜುನಾಥ, ಸದಾನಂದ, ಸೋಮನಾಥ, ಪ್ರಶಾಂತ, ಗಂಗಾಧರ್, ರಂಗನಾಥ ಸೇರಿದಂತೆ ಇತರರು ಹಾಜರಿದ್ದರು. ಕೊರಟಗೆರೆ ಪೊಲೀಸ್‍ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
