ಹೊಗೆನಕಲ್ ಒಳಹರಿವು ಕುಸಿತ….!

ಚಾಮರಾಜನಗರ

    ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ಕಾವೇರಿಯು ಜಲವೈಯ್ಯಾರ ಸೃಷ್ಟಿಸುವ ಹೊಗೆನಕಲ್ ಜಲಪಾತದಲ್ಲಿ ದಿಢೀರ್ ನೀರಿನ ಮಟ್ಟ ಹೆಚ್ಚಾಗಿ ಈಗ ಮತ್ತೇ ಇಳಿಕೆ ಕಂಡಿದೆ.

    ಇನ್ನೂ ಇದೀಗ ರಾಜ್ಯದ ಕೆಲವೆಡೆ ಮಳೆ ಆರಂಭವಾಗಿದ್ದು, ಕಾವೇರಿ ಜಲನಯನ ಪ್ರದೇಶದಲ್ಲೂ ಕೂಡ ಮಳೆಯಾಗುವ ಮುನ್ಸೂಚನೆ ಇದೆ. ಇದರಿಂದ ಮತ್ತೆ ಹೊಗೆನಕಲ್ ಕಾವೇರಿ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.

    ಇನ್ನು ತಮಿಳುನಾಡಿನ ಬಿಳಿಗುಂಡ್ಲು ಸಿಬ್ಬಂದಿ ಮಾಹಿತಿ ಪ್ರಕಾರ, ಬುಧವಾರ 4 ಸಾವಿರ ಘನ ಅಡಿಗೆ ಏರಿತ್ತು. ಗುರುವಾರ 2,800 ಘನಅಡಿ ಇದ್ದ ನೀರಿನ ಮಟ್ಟ ಈಗ 1,200ಕ್ಕೆ ಇಳಿದಿದೆ. ಹೊಗೆನಕಲ್‌ನಲ್ಲಿ ದಿಢೀರ್ ನೀರಿನ ಮಟ್ಟ ಏರಿಕೆ ಕಂಡು ಸ್ಥಳೀಯರು, ಪ್ರವಾಸಿಗರೇ ಆಶ್ಚರ್ಯಕ್ಕಳಗಾಗಿದ್ದಾರೆ. ಅಲ್ಲದೆ ಜೊತೆಗೆ ಈ ವೇಳೆ ಜಲವೈಯ್ಯಾರವನ್ನು ಕಣ್ತುಂಬಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

 

Recent Articles

spot_img

Related Stories

Share via
Copy link
Powered by Social Snap