ಕೊಪ್ಪಳ
ಅದ್ದೂರಿಯಾಗಿ, ಭಕ್ತಿಭಾವದಿಂದ ನಡೆದ ಗವಿಮಠದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಶುಕ್ರವಾರ (ಜ.17) ಸಂಜೆ ನಡೆದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೆಶ್ವರ ಸ್ವಾಮೀಜಿ ಭಕ್ತರ ಎದುರು ಭಾವುಕರಾದರು.
ನಮ್ಮ ಮಠವನ್ನು ಬೇರೆ ಮಠಕ್ಕೆ ಹೋಲಿಕೆ ಮಾಡಬೇಡಿ, ನಮ್ಮನ್ನು ಗವಿಮಠದ ಆವರಣ ಬಿಟ್ಟು ಹೊರಕ್ಕೆ ತಗೆದುಕೊಂಡು ಹೋಗಬೇಡಿ. ಯಾವುದೇ ಪ್ರಶಸ್ತಿಗಳು ನಮಗೆ ಬೇಡ. ಈ ಮೂರನ್ನು ಮಾಡಬೇಡಿ ಎಂದು ಭಾವುಕರಾಗಿ ಭಕ್ತರಲ್ಲಿ ಮನವಿ ಮಾಡಬೇಡಿ.
