ತನ್ನ ಮಗಳ ಸಹಪಾಠಿಯ ಮರ್ಮಾಂಗ ಕತ್ತರಿಸಿದ ತಂದೆ….!

ಗೋರಖ್‍ಪುರ: 

       ತನ್ನ ಮಗಳ ಜತೆ ಅನುಚಿತ ಸ್ಥಿತಿಯಲ್ಲಿದ್ದ ಯುವಕನನ್ನು ನೋಡಿದ ತಂದೆ ಆವನನ್ನು ಥಳಿಸಿ ಅವನ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

        11ನೇ ತರಗತಿಯ ತನ್ನ ಮಗಳ ಸಹಪಾಠಿ ದೀಪಚಂದ ಗುಪ್ತಾ ಹಲ್ಲೆಗೊಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ಹುಡುಗನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು , ಈಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ .

         ತಂದೆ ಬಂದಾಗ ತನ್ನ ಮನೆಯಲ್ಲಿ ತನ್ನ ಪುತ್ರಿ ಜತೆ ನೋಡಲಾಗದದ ಸ್ಥಿತಿಯಲ್ಲಿದ್ದ ಯುವಕನನ್ನು ಕಂಡ ತಂದೆ ಹಾಗೂ ಇಬ್ಬರು ಪುತ್ರರು ಆ ಹುಡಗನ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

         ಘಟನೆ ಬಳಿಕ  ಯುವಕ ನೋವಿನಿಂದ ನರಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದು ಖಜ್ನಿ ಠಾಣೆಯ ಉಸ್ತುವಾರಿ ಮನೋಜ್ ರೈ ಹೇಳಿದ್ದಾರೆ.

         ಅವರಿಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.  ಪ್ರೀತಿಗೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಸಾಕಷ್ಟು ಬಾರಿ ಇಬ್ಬರಿಗೂ ಬುದ್ಧಿವಾದ ಹೇಳಿದ್ದರೂ ಇಬ್ಬರು ಪ್ರೀತಿ ಮುಂದುವರಿಸಿದ್ದರು ಎಂದು ತಿಳಿಸಿದ್ದಾರೆ.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap