ನವದೆಹಲಿ:
ವೆಬ್ ಹೋಸ್ಟಿಂಗ್ ಮುಂಚೂಣಿಯಲ್ಲಿರುವ GoDaddy ಸಹ ಲೇ ಆಫ್ ಸಂಸ್ಕೃತಿಯಿಂದ ಹೊರತಾಗಿಲ್ಲ ಇದು ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯ ಶೇ.8ರಷ್ಟು ಜನರನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎಂದು GoDaddy ಸಿಇಒ ಅಮನ್ ಭೂತಾನಿ ತಿಳಿಸಿದ್ದಾರೆ.
ಇನ್ನು ಇದಕ್ಕೆ ಕಾರಣ ಕೇಳಿದಾಗ ಪರಿಸ್ಥಿತಿ ತೀರಾ ಕಷ್ಟಕರವಾಗಿದ್ದು ಆರ್ಥಿಕವಾಗಿ ಕಂಪನಿಯು ತುಂಬಾ ನಷ್ಟ ಅನುಭವಿಸುತ್ತಿದೆ ಎಂದದಿದ್ದಾರೆ
ಸಿಬ್ಬಂದಿಗೆ ಇಮೇಲ್ ಕಳಿಸಿರುವ ಭೂತಾನಿ, ಪ್ರತಿ ವಿಭಾಗ ಮತ್ತು ಸಂಸ್ಥೆಯ ಹಲವಾರು ಹಂತಗಳ ನೌಕರರನ್ನು ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ. ಸಂಸ್ಥೆಯ ಹೆಚ್ಚಿನ ಲೇ ಆಫ್ ಗಳು ಅಮೇರಿಕದಲ್ಲಿ ಆಗಲಿವೆ ಎನ್ನಲಾಗಿದೆ.
‘ನಮ್ಮ ಮೂರು ಬ್ರ್ಯಾಂಡ್‌ಗಳಾದ ಮೀಡಿಯಾ ಟೆಂಪಲ್, ಮೇನ್ ಸ್ಟ್ರೀಟ್ ಹಬ್ ಮತ್ತು 123 ರೆಗ್ ಅನ್ನು GoDaddy ಯೊಂದಿಗೆ ಹೆಚ್ಚು ಆಳವಾಗಿ ಸಂಯೋಜಿಸಲು ಕೆಲಸ ನಡೆಯುತ್ತಿದೆ. ಈ ಕಾರಣ ವಜಾಗೊಳಿಸುವುದು ಅನಿವಾರ್ಯವಾಗಿದೆ’ ಎಂದು ಅವರು ಬರೆದಿದ್ದಾರೆ. ವಜಾಗೊಂಡಿರುವ ತಂಡದ ಸದಸ್ಯರ ಜೊತೆ ಚರ್ಚಿಸಲು ಅವರನ್ನು ಸಭೆಗೆ ಆಹ್ವಾನಿಸಿದೆ.








