ದೇಶಾದ್ಯಂತ ಕೊಂಚ ಇಳಿಕೆ ಕಂಡ ಚಿನ್ನ; ಇಂದಿನ ಬೆಲೆ ಹೀಗಿದೆ

ಬೆಂಗಳೂರು:

     ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದೆ.  ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 20 ರೂ. ಇಳಿಕೆ ಕಂಡಿದೆ. 24 ಕ್ಯಾರೆಟ್‌ನ ಒಂದು ಗ್ರಾಂನಲ್ಲಿ 22 ರೂ ಇಳಿಕೆ ಕಂಡಿದೆ. 22 ಕ್ಯಾರಟ್‌ ಚಿನ್ನದ ಬೆಲೆ 11,950 ರೂ. ಆದರೆ, 24 ಕ್ಯಾರಟ್‌ ಚಿನ್ನದ ದರ 13,036 ರೂ. ಇದೆ. 22 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 95,600 ರೂ ಹಾಗೂ 10 ಗ್ರಾಂಗೆ ನೀವು 1,19,500 ರೂ. ಮತ್ತು 100 ಗ್ರಾಂ ಗೆ 11,95,000 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,04,288 ರೂ. ನೀಡಿದರೆ, 10 ಗ್ರಾಂಗೆ ನೀವು 1,30,360 ರೂ ಪಾವತಿಸಬೇಕಾಗುತ್ತದೆ. 100 ಗ್ರಾಂಗೆ 13,03,600 ರೂಗಳನ್ನು ನೀಡಬೇಕಾಗುತ್ತದೆ. 

     ದೇಶದ ಬೇರೆ ಬೇರೆ ನಗರಗಳಲ್ಲಿ ಚಿನ್ನದ ದರವನ್ನು ನೋಡುವುದಾದರೆ ಬೆಂಗಳೂರು,ಹೈದರಾಬಾದ್‌ ಹಾಗೂ ಕೊಲ್ಕತ್ತಾದಲ್ಲಿ 22 ಕ್ಯಾರಟ್‌ ಚಿನ್ನ 11,950 ರೂ ಆದರೆ, 24 ಕ್ಯಾರಟ್‌ ಚಿನ್ನದ ದರ 13,036 ರೂ ಇದೆ. ದೆಹಲಿಯಲ್ಲಿ ಕೊಂಚ ವ್ಯತ್ಯಾಸವಿದ್ದು, 22 ಕ್ಯಾರಟ್‌ ಚಿನ್ನ 11,965ರೂ. ಹಾಗೂ 24 ಕ್ಯಾರಟ್‌ ಚಿನ್ನದ ದರ 13,051 ರೂ. ಇದೆ.

    ಬೆಂಗಳೂರಿನಲ್ಲಿ ಬೆಳ್ಳಿದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಳ್ಳಿ ದರ 191 ರೂ ಇದ್ದು, 8 ಗ್ರಾಂ ಬೆಳ್ಳಿಗೆ 1,528 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ 1,91,000 ರೂ. ಪಾವತಿಸಬೇಕು. ದೆಹಲಿ, ಮುಂಬೈ, ಕೋಲ್ಕತ್ತಾದಲ್ಲಿಯೂ ಇದೇ ದರ ಇದೆ.

Recent Articles

spot_img

Related Stories

Share via
Copy link