ಪ್ರಮೋಷನಲ್ ಗಾಲ್ಫ್ ಚಾಂಪಿಯನ್‌ಶಿಪ್ 2025 ಆಯೋಜಿಸುತ್ತಿರುವ ವಿ ಗ್ರೂಪ್

ಬೆಂಗಳೂರು

    ವಿ ಗ್ರೂಪ್ ಸಂಸ್ಥೆಯು ತನ್ನ ಬಹು ನಿರೀಕ್ಷಿತ ಗಾಲ್ಫ್ ಟೂರ್ನಮೆಂಟ್ ಆದ ಪ್ರಮೋಷನಲ್ ಗಾಲ್ಫ್ ಚಾಂಪಿಯನ್ ಶಿಪ್ 2025 ಅನ್ನು ಏಪ್ರಿಲ್ ತಿಂಗಳಲ್ಲಿ ಆಯೋಜಿಸುತ್ತಿದೆ. ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಕುಮಾರ ಕೃಪಾ ಅತಿಥಿಗೃಹದ ಎದುರಿಗೆ ಇರುವ ಬೆಂಗಳೂರು ಗಾಲ್ಫ್ ಕ್ಲಬ್ ನಲ್ಲಿ ನಡೆಯಲಿರುವ ಈ ಚಾಂಪಿಯನ್ ಶಿಪ್ ನಲ್ಲಿ ದೇಶಾದ್ಯಂತ ಇರುವ ಗಾಲ್ಫ್ ಉತ್ಸಾಹಿಗಳು ಭಾಗವಹಿಸಲಿದ್ದಾರೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ವಾರದ ಮಧ್ಯದ ದಿನಗಳಲ್ಲಿ ಆರಂಭಿಕ ಹಂತದ ಪಂದ್ಯಗಳು ನಡೆಯಲಿದ್ದು, ವಾರಾಂತ್ಯದಲ್ಲಿ ಅಂತಿಮ ಸುತ್ತುಗಳು ನಡೆಯಲಿದೆ.

    ವಿ ಗ್ರೂಪ್ ಸಂಸ್ತೆಯು ಆರ್ ಬಿ ಐ ಟಿ ಸಿ (ರೋಟರಿ ಬೆಂಗಳೂರು ಐಟಿ ಕಾರಿಡಾರ್) ಸಹಭಾಗಿತ್ವದಲ್ಲಿ ಈ ಗಾಲ್ಫ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಅವರ ಎಪಿಕ್ ಯೋಜನೆಗೆ (ಎಪಿಲೆಪ್ಸಿ ಪ್ರಿವೆನ್ಶನ್ & ಇಂಟಿಗ್ರೇಟೆಡ್ ಕೇರ್) ಈ ಮೂಲಕ ಹಣಕಾಸು ನೆರವು ನೀಡುತ್ತಿದೆ.

    ಅಧಿಕೃತ ಕ್ಲಬ್ ಗಳಲ್ಲಿ ಸದಸ್ಯತ್ವ ಪಡೆಯದವರು ಕೂಡ ಈ ಪಿಜಿಸಿ ಗಾಲ್ಫ್ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ. ಈ ಪಂದ್ಯಾವಳಿಯಲ್ಲಿ ಎಲ್ಲಾ ರೀತಿಯ ಕೌಶಲ್ಯ ಹೊಂದಿರುವ ಗಾಲ್ಫ್ ಆಟಗಾರರನ್ನು ಆಹ್ವಾನಿಸಲಾಗಿದೆ. ಈ ಪಂದ್ಯಾವಳಿಯ ಮೂಲಕ ಎಲ್ಲರಿಗೂ ಸೊಗಸಾದ ಗಾಲ್ಫ್ ಅನುಭವವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ.

   ಪಿಜಿಸಿಯಲ್ಲಿ ಭಾಗವಹಿಸುವವರು ಅತ್ಯುತ್ತಮ ನೆಟ್ ವರ್ಕಿಂಗ್ ಹೊಂದುವ ಅವಕಾಶವನ್ನು ಪಡೆಯಬಹುದಾಗಿದೆ. ಅತ್ಯುತ್ತಮ ಸಂಪರ್ಕಗಳನ್ನು ಗಳಿಸಬಹುದಾಗಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವವರು ಆಕರ್ಷಕ ಬಹುಮಾನದ ಜೊತೆಗೆ ಅವಿಸ್ಮರಣೀಯ ನೆನಪುಗಳನ್ನು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ.

   ಈ ಕುರಿತು ಮಾತನಾಡಿರುವ ವಿ ಗ್ರೂಪ್ (ವಿ ಜಿ ಮೈಸ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್) ನಿರ್ದೇಶಕ ವೆಂಕಟೇಶ್ ಕೆ ಆರ್ ಅವರು, “ಈ ವರ್ಷದ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಸೊಗಸಾದ ಗಾಲ್ಫ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಗಾಲ್ಫ್ ಆಟಗಾರರನ್ನು ಆಹ್ವಾನಿಸುತ್ತಿದ್ದೇವೆ. ಈ ಪಂದ್ಯಾವಳಿಯು ನಮ್ಮ ಸ್ಥಳೀಯ ಮತ್ತು ದೇಶದ ವಿವಿಧ ಭಾಗಗಳ ಗಾಲ್ಫ್ ಆಟಗಾರರ ಪ್ರತಿಭೆಯನ್ನು ಪ್ರದರ್ಶಿಸಲಿದ್ದು, ನಮ್ಮ ಸಮುದಾಯದಲ್ಲಿ ಸೌಹಾರ್ದತೆ ಮತ್ತು ಕ್ರೀಡಾ ಮನೋಭಾವವನ್ನು ಬೆಳೆಸುತ್ತದೆ” ಎಂದು ಹೇಳಿದರು.

   ಪಂದ್ಯಾವಳಿಯ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಆಸಕ್ತರು www.thepgc.in ಗೆ ಭೇಟಿ ನೀಡುವ ಮೂಲಕ ಅಥವಾ +91 6360700180 ಅನ್ನು ಸಂಪರ್ಕಿಸುವ ಮೂಲಕ ಹೆಸರು ನೋಂದಾಯಿಸಬಹುದು

Recent Articles

spot_img

Related Stories

Share via
Copy link