ಬೆಂಗಳೂರು:
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಸಂಭಾವನೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮೌಲ್ಯಮಾಪನ ಕೇಂದ್ರದ ಜಂಟಿ ಮುಖ್ಯ ಪರೀಕ್ಷಕರ ಪರಿಷ್ಕೃತ ಸಂಭಾವನೆ 7,270 ರೂ. (ಹಿಂದೆ 6,924 ರೂ.), ಉಪ ಮುಖ್ಯ ಪರೀಕ್ಷಕರ ಸಂಭಾವನೆ 5,204 ರೂ.(ಹಿಂದೆ 5,464 ರೂ.)ಗೆ ಹೆಚ್ಚಿಸಲಾಗಿದೆ.
ಪ್ರಥಮ ಭಾಷೆ ಪ್ರತಿ ಉತ್ತರ ಪತ್ರಿಕೆಗೆ 23 ರೂ.(ಹಿಂದೆ 22), ದ್ವಿತೀಯ/ತೃತೀಯ ಭಾಷೆ ಪ್ರತಿ ಉತ್ತರ ಪತ್ರಿಕೆಗೆ 21 ರೂ. (ಹಿಂದೆ 20ರೂ.), ಐಚ್ಛಿಕ ವಿಷಯಗಳ ಪ್ರತಿ ಉತ್ತರ ಪತ್ರಿಕೆಗೆ 21 ರೂ. (ಹಿಂದೆ 20) ನಿಗದಿ ಮಾಡಲಾಗಿತ್ತು.
ಭತ್ಯೆಯಲ್ಲೂ ಹೆಚ್ಚಳ:
ದಿನಭತ್ಯೆ(ಬೆಂಗಳೂರು) 596 ರೂ. (ಹಿಂದಿನ ದರ 568), ದಿನಭತ್ಯೆ(ಇತರ ಸ್ಥಳ) 469 ರೂ.(ಹಿಂದಿನ ದರ 447 ರೂ.), ಸ್ಥಳೀಯ ಭತ್ಯೆ(ಬೆಂಗಳೂರು) 234 ರೂ. (ಹಿಂದಿನ ದರ 223 ರೂ.), ಸ್ಥಳೀಯ ಭತ್ಯೆ(ಇತರ ಸ್ಥಳ) 189 ರೂ.(ಹಿಂದಿನ ದರ 180 ರೂ.), ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ ಪರಿಷ್ಕೃತ ದರ 4,515 ರೂ. (ಹಿಂದಿನ ದರ 4,300 ರೂ.), ಕ್ಯಾಂಪ್ ಸಹಾಯಕರಿಗೆ 1,260 ರೂ. (ಹಿಂದಿನ ದರ 1,200 ರೂ.), `ಡಿ’ ದರ್ಜೆ ಸಿಬ್ಬಂದಿಗೆ 630 ರೂ. (ಹಿಂದಿನ ದರ 600 ರೂ.)ಗೆ ಹೆಚ್ಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
