ಭಾರತೀಯ ಸುಂದರ್​ ಪಿಚೈ ಈಗ ಗೂಗಲ್ ಮಾತೃ ಸಂಸ್ಥೆ ಮುಖ್ಯಸ್ಥ!!

ಸ್ಯಾನ್‍ಫ್ರಾನ್ಸಿಸ್ಕೋ: 

      ಗೂಗಲ್‌ನ ಸಿಇಒ ಭಾರತ ಮೂಲದ ಸುಂದರ್ ಪಿಚೈ ಈಗ ಜಾಗತಿಕ ಐಟಿ ದಿಗ್ಗಜ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

      ಗೂಗಲ್ ಸಹ-ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ಸಕ್ರಿಯ ನಿರ್ವಹಣೆ ಹುದ್ದೆಯಿಂದ ಕೆಳಗಿಳಿದ ಬಳಿಕ ಭಾರತ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ ಅವರು ಮೂಲ ಸಂಸ್ಥೆ ಆಲ್ಫಾಬೆಟ್‌ನ ಪ್ರಭಾವಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಸರ್ಜಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮಂಗಳವಾರ ಈ ನಿ ರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ವಿಶ್ವದ ಅತ್ಯಂತ ಶಕ್ತಿಶಾಲಿ ಕಾರ್ಪೊರೇಟ್ ಲೀಡರ್​​ಗಳಲ್ಲಿ ಪಿಚೈ ಒಬ್ಬರಾಗಲಿದ್ದಾರೆ.

      15 ವರ್ಷಗಳಿಂದ ಅತ್ಯಂತ ನಿಕಟ ಸಂಪರ್ಕದಲ್ಲಿರುವ, ಗೂಗಲ್‌ ಬೆಳವಣಿಗೆಯಲ್ಲಿ ಜತೆಯಾಗಿರುವ, ಆಲ್ಫಾಬೆಟ್‌ ರಚನೆಯಲ್ಲಿ ಸಹಕಾರ ನೀಡಿರುವುದು, ಗೂಗಲ್‌ ಸಿಇಒ ಆಗಿ ಆತ್ಮ ವಿಶ್ವಾಸ ಹೆಚ್ಚಿಸಿರುವ ಹಾಗೂ ಹಲವು ಪ್ರಮುಖ ಸವಾಲುಗಳನ್ನು ಎದುರಿಸಲು ಕೈಜೋಡಿಸಿರುವ ಸುಂದರ್‌ ಪಿಚೈಗಿಂತಲೂ ಗೂಗಲ್‌ ಮತ್ತು ಆಲ್ಫಾಬೆಟ್‌ ಮುನ್ನಡೆಸಬಲ್ಲ ಮತ್ತೊಬ್ಬ ವ್ಯಕ್ತಿ ಇಲ್ಲ ಎಂದು ಲ್ಯಾರಿ ಪೇಜ್‌ ಮತ್ತು ಸೆರ್ಗಿ ಬ್ರಿನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     ಆಲ್ಫಾಬೆಟ್​​ ಬಗ್ಗೆ ನಾನು ತೀವ್ರ ಕುತೂಹಲ ಹೊಂದಿದ್ದೇನೆ. ಗೂಗಲ್​​ನ ಕಾರ್ಯ ಎಂದಿನಂತೆ ಆಳವಾಗಿ ನಡೆದಿದ್ದು, ಆಲ್ಫಾಬೆಟ್​​ನಿಂದ ನೂತನ ತಂತ್ರಜ್ಞಾನದ ಮೂಲಕ ದೊಡ್ಡ ಸವಾಲುಗಳನ್ನು ಎದುರಿಸುವಲ್ಲಿ ಧೀರ್ಘ ಕಾಲದ ಗಮನ ಹೊಂದಿದ್ದೇನೆ ಎಂದು ಸುಂದರ್​ ಪಿಚೈ ಹೇಳಿದ್ದಾರೆ.

      ಸದ್ಯ ಗೂಗಲ್​​ ಹಾಗೂ ಆಲ್ಫಾಬೆಟ್​​ ಎರಡೂ ಕಂಪನಿಯ ಸಿಇಒ ಜವಾಬ್ದಾರಿ ಪಿಚೈ ಹೆಗಲ ಮೇಲೆ ಬಿದ್ದಿದ್ದು, ವಿವಿಧ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಾಜ್ಞಾನದ ಆವಿಷ್ಕಾರಗಳ ಬಗ್ಗೆ ಪಿಚೈ ಯೋಚಿಸಿದ್ದಾರೆ.

      5 ವರ್ಷಗಳ ಹಿಂದೆ 2005ರ ಅಕ್ಟೋಬರ್ 2 ರಂದು ಗೂಗಲ್, ಕ್ಯಾಲಿಕೋ, ಗೂಗಲ್ ಫೈಬರ್, ಡೀಪ್ ಮೈಂಡ್ ಸೇರಿದಂತೆ ಎಲ್ಲವನ್ನೂ ಒಗ್ಗೂಡಿಸಲು ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ಸ್ಥಾಪಿಸಿ ಪೇಜ್ ಮತ್ತು ಬ್ರಿನ್ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap