ಉದ್ಯೋಗಿಗಳಿಗೆ ಶಾಕ್‌ ನೀಡಿದ ಗೂಗಲ್‌….!

ನವದೆಹಲಿ 

     ಗೂಗಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದರೆ ಸಾಕು ಲೈಫ್‌ ಸೆಟಲ್‌ ಆಯ್ತು ಮತ್ತು ಎಲ್ಲಾ ರೀತಿಯ ಸವಲತ್ತು ಮತ್ತು ಸೌಕರ್ಯಗಳು ಇರತ್ತವೆ ಎಂದುಕೊಳ್ಳುವವರಿಗೆ ಈಗ ದೊಡ್ಡ ಶಾಕ್‌ ಕಾದಿದೆ, ಅದೇನೆಂದರೆ ವೆಚ್ಚ ನಿಯಂತ್ರಣಕ್ಕಾಗಿ ಗೂಗಲ್‌  ಈಗಾಗಲೇ ಉದ್ಯೋಗ ಕಡಿತ ಮಾಡಿದ್ದು ಕಂಪನಿ ವೆಚ್ಚ ಕಡಿಮೆ ಮಾಡಲು ಮತ್ತೊಂದು ಕ್ರಮಕ್ಕೆ ಮುಂದಾಗಿದೆ.

     ಗೂಗಲ್ ಉದ್ಯೋಗಿಗಳಿಗೆ ನೀಡಲಾಗುವ ಸೌಕರ್ಯವನ್ನು ಕಡಿತಗೊಳ್ಳಿಸಲು ಮುಂದಾಗಿದೆ . ಆದ್ದರಿಂದ ಗೂಗಲ್ ತನ್ನ ಕೆಲವು ವಿಪರೀತ ವೆಚ್ಚಗಳನ್ನು ಕಡಿಮೆ ಮಾಡುವ ನಿರ್ಧಾರವನ್ನು ಮಾಡಿದೆ.ಮೈಕ್ರೋ ಕಿಚನ್‌ಗಳಿಂದ ತಿಂಡಿ, ಲಾಂಡ್ರಿ ಸೇವೆಗಳು, ಮಸಾಜ್‌ ಸೇವೆಗಳನ್ನು ಹಿಂತೆಗೆದುಕೊಳ್ಳಲಾಗುವುದು ಅಥವಾ ತೆಗೆದುಹಾಕಲಾಗುವುದು ಎಂದು ವರದಿಯಾಗಿದೆ.

     ವೆಚ್ಚವನ್ನು ಕಡಿಮೆ ಮಾಡಲು ಗೂಗಲ್ ನೇಮಕಾತಿ ಪ್ರಕ್ರಿಯೆಯನ್ನೂ ಸಹ ವಿಳಂಬ ಗೊಳಿಸುತ್ತದೆ .ಗೂಗಲ್‌ನ ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಾಟ್ ಈ ಬಗ್ಗೆ ಪ್ರತಿಕ್ರಿಯಿಸಿ, ಹೆಚ್ಚಿನ ಆದ್ಯತೆಯ ಕೆಲಸದ ಮೇಲೆ ಕೇಂದ್ರೀಕರಿಸಲು ನಿಗಮವು ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link