ನವದೆಹಲಿ :
ಗೂಗಲ್ ಪಿಕ್ಸಲ್ ಫೋನ್‌ನ್ನು ಎದುರು ನೋಡುತ್ತಿರುವ ಗ್ರಾಹಕರಿಗೆ ಖುಷಿ ಸುದ್ದಿ ಒಂದು ಸಿಕ್ಕಿದೆ. ಗೂಗಲ್ ಕಂಪನಿಯ Google Pixel 8a ಫೋನ್ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಈ ನೂತನ ಸ್ಮಾರ್ಟ್‌ಫೋನ್ ಮೇ 14ರಂದು ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ.
ಈಗಾಗಲೇ ಫೋನ್ ಬಗ್ಗೆ ಕೆಲವು ಮಾಹಿತಗಳು ಸೋರಿಕೆ ಆಗಿವೆ. Google I/O 2024 ಈವೆಂಟ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಫೋನ್ ಅಧಿಕೃತವಾಗುವ ಮೊದಲು, ಅದರ ಬಗ್ಗೆ ಹಲವು ಮಾಹಿತಿಗಳು ಸೋರಿಕೆ ಆಗಿವೆ. ಈ ಫೋನ್‌ನ್ನು ಗ್ರಾಹಕ ತನ್ನ ಜೇಬಿಗೆ ಹೊರ ಆಗದಂತೆ ಪಡೆದುಕೊಳ್ಳಬಹುದಾಗಿದೆ. ಕೆಲವೇ ದಿನಗಳ ಹಿಂದೆ, Pixel 8a ನ ಕೆಲವು ಚಿತ್ರಗಳು ಸೋರಿಕೆಯಾಗಿದ್ದು, ಈ ಫೋನ್ ಅನ್ನು 4 ರೂಪಾಂತರಗಳಲ್ಲಿ ನೀಡಬಹುದು ಎಂದು ತಿಳಿದು ಬಂದಿದೆ.
ಸೋರಿಕೆಯಾದ ಮಾಹಿತಿಯ ಪ್ರಕಾರ Pixel 8a ಬೆಲೆಯು US $ 500 ರಿಂದ 550 ರ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ರೂಪಾಯಿಗಳಲ್ಲಿ ಸುಮಾರು 41,648 ರಿಂದ 45,813 ರೂಪಾಯಿಗಳಲ್ಲಿ ಗ್ರಾಹಕರ ಕೈಗೆಟಕುವ ಸಾಧ್ಯತೆ ಇದೆ. ಈ ಬಜೆಟ್‌ನಲ್ಲಿ ಗೂಗಲ್ ತನ್ನ ಹೊಸ ಫೋನ್ ರಿಲೀಸ್ ಮಾಡಲು ಹೊರಟಿದ್ದು, ನಿಜಕ್ಕೂ ಬೇರೆ ಫೋನ್‌ಗಳಿಗೆ ಪೈಪೋಟಿ ನೀಡುವುದಂತೂ ಸುಳ್ಳು ಅಲ್ಲ. ಗೂಗಲ್ 50 ಸಾವಿರ ರೂಪಾಯಿಯ ಒಳಗಡೆ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಇರಾದೆಯನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಫೋನ್ 4,500mAh ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಸಾಧ್ಯತೆ ಇದೆ.
ಗೂಗಲ್ ನೂತನ ಫೋನ್‌ನಲ್ಲಿ ಎಐಗೆ ಒತ್ತು ನೀಡುವ ಕೆಲಸ ನಡೆದಿದೆ ಎಂದು ತಿಳಿದು ಬಂದಿದೆ. ಗೂಗಲ್ ಇನ್ನೂ ಅಧಿಕೃತವಾಗಿ Pixel 8a ಅನ್ನು ಘೋಷಿಸಿಲ್ಲ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಕಂಪನಿ ಇನ್ನು ದೃಢ ಪಡಿಸಿಲ್ಲ. ಸದ್ಯ, ಗೂಗಲ್ ತನ್ನ I/O ಈವೆಂಟ್ ಬಗ್ಗೆ ಕೆಲವು ದಿನಗಳ ಹಿಂದೆ ಮಾಹಿತಿ ನೀಡಿತ್ತು.
Pixel 8a ಕುರಿತು Google ಇನ್ನೂ ಯಾವುದೇ ನಿಖರವಾದ ಮಾಹಿತಿಯನ್ನು ನೀಡಿಲ್ಲವಾದರೂ, ಈ ಫೋನ್‌ನ ವೈಶಿಷ್ಟ್ಯಗಳನ್ನು ಸೋರಿಕೆ ಆಗಿವೆ. ಈ ಸ್ಮಾರ್ಟ್‌ಫೋನ್ 6.1-ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 1,080×2,400 ಪಿಕ್ಸೆಲ್‌ಗಳನ್ನು ಹೊಂದಿರುವ ಸಾಧ್ಯತೆ ಇದೆ. OLED ಪ್ಯಾನೆಲ್ ಅನ್ನು ಹೊಂದಿರುತ್ತದೆ, ಇದು 120Hz ರಿಫ್ರೆಶ್ ದರ ಹೊಂದಿರುವ ಸಂಭವ ಇದೆ. ಮತ್ತು 1,400nits ಪೀಕ್ ಬ್ರೈಟ್‌ನೆಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ.
Pixel 8a ಟೆನ್ಸರ್ G3 ಚಿಪ್‌ಸೆಟ್ ಅನ್ನು ಹೊಂದಿರುತ್ತದೆ. ಇದರ ಹೊರತಾಗಿ, ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆಯಬಹುದು. ಈ ಫೋನ್ 64MP ಪ್ರೈಮರಿ ಕ್ಯಾಮೆರಾವನ್ನು ಹೊಂದಿರಲಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 13 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್-ಆಂಗಲ್ ಸೆಕೆಂಡರಿ ಸೆನ್ಸಾರ್ ಹೊಂದಿರುವ ನಿರೀಕ್ಷೆ ಇದೆ. ಸೆಲ್ಫಿ ಹಾಗೂ ವಿಡಿಯೋಗಳಿಗೆ 13 ಮೆಗಾ ಪಿಕ್ಸಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ