ಜಾತಿ ಗಣತಿ ವರದಿಯಲ್ಲಿ ಮಾದಿಗ ಎಂದು ನಮೂದಿಸಿ :ಎನ್ ವೈ ಗೋಪಾಲಕೃಷ್ಣ

ನಾಯಕನಹಟ್ಟಿ :

    ಜಾತಿ ಗಣತಿ ವರದಿಯಲ್ಲಿ ಮಾದಿಗ ಎಂದು ನಮೂದಿಸಿ ಮಾದಿಗ ಎನ್ನುವುದನ್ನು ಬಿಟ್ಟು ಬೇರೆ ಜಾತಿಯ ಹೆಸರು ಬರಸಬೇಡಿ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರು.

  ಪಟ್ಟಣದಲ್ಲಿ ಸೋಮವಾರ ವಾಲ್ಮೀಕಿ ವೃತ್ತದಲ್ಲಿ ನಾಯಕನಹಟ್ಟಿ ಹೋಬಳಿಯ ಮಾದಿಗ ಸಮಾಜ ಹಾಗೂ ಮಾದಿಗ ನೌಕರರ ವರ್ಗ, ಮಾದಿಗ ಸೇವಾ ಟ್ರಸ್ಟ್ ವತಿಯಿಂದ ನಡೆದ ಡಾ. ಬಿ ಆರ್ ಅಂಬೇಡ್ಕರ್ ೧೩೪ನೇ ಮತ್ತು ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ ೧೧೮ನೇ ಜಯಂತೋತ್ಸವವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ರವರ ಅಧ್ಯಕ್ಷತೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

   ನಂತರ ಮಾತನಾಡಿದ ಅವರು ಸಂಘಟನೆ ಇರಬೇಕು, ಶಕ್ತಿ ಪ್ರದರ್ಶನವಾಗಬೇಕು, ಸಂಘಟನೆಯಿAದ ನಮಗೆ ದೊರೆಯುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಅಂಬೇಡ್ಕರ್ ಅವರ ಹಿಂದಿನ ಜೀವನವನ್ನು ನೆನಪಿಸಿಕೊಂಡರೆ ನಮಗೆ ನೋವಾಗುತ್ತದೆ. ಅಂತ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡಿ ಸಂವಿಧಾನವನ್ನು ಬರೆದಿದ್ದಾರೆ. ಯಾರು ಏನೇ ಹೇಳಿದರೂ ಕೂಡ ಜಾತಿಗಣತಿ ವರದಿಗೆ ಮಾದಿಗ ಎಂದು ನಮೂದಿಸಿ. ಮಾದಿಗ ಎನ್ನುವುದನ್ನು ಬಿಟ್ಟು ಬೇರೆ ಜಾತಿಯ ಹೆಸರು ಬರಸಬೇಡಿ ಎಂದು ಹೇಳಿದರು.

   ಅನೇಕ ಜನಪ್ರತಿನಿಧಿಗಳು ಹೋರಾಟ ನಡೆಸಿದ್ದಾರೆ. ಪಕ್ಷಾತೀತವಾಗಿ ಮೀಸಲಾತಿ ಗೋಸ್ಕರ ಹೋರಾಟ ಮಾಡಿದ್ದಾರೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ೧೦೦ಕ್ಕೆ ೯೯ ರಷ್ಟು ಮೀಸಲಾತಿ ನೀಡುತ್ತಾರೆ ಎಂಬ ನಂಬಿಕೆ ನನಗಿದೆ.ಇತ್ತೀಚಿನ ದಿನಗಳಲ್ಲಿ ಸಮಿತಿ ರಚನೆ ಮಾಡಿ ಸಮಿತಿ ಮುಖಾಂತರ ಮನೆ ಮನೆಗೆ ತೆರಳಿ ಜನಗಣತಿ ನಡೆಸಿಲಿದ್ದಾರೆ. ೨೫ ರಿಂದ ೨೬ ಸಾವಿರ ಶಿಕ್ಷಕರನ್ನು ಜಾತಿ ಜನಗಣತಿಗೆ ನಿಯೋಜನೆಗೊಳಿಸಿದ್ದಾರೆ ಎಂದರು.

   ಚಿತ್ರದುರ್ಗ ಲೋಕಸಭಾ ಸಂಸದರಾದ ಗೋವಿಂದ್ ಎಂ ಕಾರಜೋಳ ಮಾತನಾಡಿ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಒಳ ಮೀಸಲಾತಿ ಜಾರಿಗೊಳಿಸಿವೆ. ಆದರೆ ಈಗಿನ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಒಳ ಮೀಸಲಾತಿಗಾಗಿ ೪೦ ದಿನಗಳ ನಂತರ ಒಳ ಮೀಸಲಾತಿ ಜಾರಿಗೊಳಿಸುವವರೆಗೂ ಹೋರಾಟ ನಡೆಸಬೇಕು. ಈಗಿನ ಸರ್ಕಾರ ಜಾರಿ ಮಾಡುವುದಕ್ಕೆ ಆಸಕ್ತಿ ಇಲ್ಲ ಎಂದು ಆರೋಪಿಸಿದರು.

    ನಾವೆಲ್ಲರೂ ಒಂದಾಗಿ ಹೋರಾಟ ಮಾಡಿದರೆ ಜಯ ಸಿಗುತ್ತದೆ.ಮಾದಿಗ ಸಮಾಜದವರು ಒಳ ಮೀಸಲಾತಿಗಾಗಿ ೩೦ ವರ್ಷದ ಸುಧೀರ್ಘ ಹೋರಾಟಗಳಿಗೆ ೨೪ ಡಿಸೆಂಬರ್ ೨೦೨೪ ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಈ ತೀರ್ಪಿನಂತೆ ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ರಾಜ್ಯಗಳು ಒಳ ಮೀಸಲಾತಿಯನ್ನು ಜಾರಿ ಮಾಡಿವೆ. ಆದರೆ ಕರ್ನಾಟಕ ರಾಜ್ಯದಲ್ಲಿ ಇನ್ನು ಒಳ ಮೀಸಲಾತಿ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ಮೀನ ಮೇಷ ಎಣಿಸುತ್ತಿದೆ.

     ರಾಜ್ಯದಲ್ಲಿ ಮಾಡದೇ ಇರುವಂತಹ ಸಮಿತಿಗಳನ್ನು ಕರ್ನಾಟಕ ರಾಜ್ಯದಲ್ಲಿ ಸಮಿತಿ ರಚನೆ ಮಾಡಿದೆ. ಏಕೆಂದರೆ ದತ್ತಾಂಶ ಸರಿ ಇಲ್ಲ ಎನ್ನುವ ಕಾರಣ ನೀಡಿ ಸಮಿತಿಯನ್ನು ರಚನೆ ಮಾಡಿ ವಿನಾಕಾರಣ ಕಾಲಹರಣ ಮಾಡುತ್ತಿದೆ. ದತ್ತಾಂಶ ಸರಿ ಇಲ್ಲ ಎನ್ನುವುದಾದರೆ ರಾಜ್ಯದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿ , ಆದಿ ಜಾಂಬವ ಅಭಿವೃದ್ಧಿ ನಿಗಮ ಮಂಡಳಿ, ಬೋವಿ ಅಭಿವೃದ್ಧಿ ನಿಗಮ ಮಂಡಳಿ, ಬಂಜಾರ ಅಭಿವೃದ್ಧಿ ನಿಗಮ ಮಂಡಳಿಗಳಿಗೆ ಯಾವ ದತ್ತಾಂಶದ ಆಧಾರದ ಮೇಲೆ ಅನುದಾನ ಬಿಡುಗಡೆಗೊಳಿಸುತ್ತಿದ್ದಾರೆ ಎನ್ನುವುದು ಮಾಹಿತಿ ನೀಡುವಂತೆ ಹೇಳಿದರು.

   ರಾಜ್ಯ ಸರ್ಕಾರದ ಕ್ರಮವನ್ನು ನೋಡುತ್ತಿದ್ದರೆ ಇನ್ನೂ ೩೦ ವರ್ಷ ಒಳ ಮೀಸಲಾತಿಯಾಗಿ ಹೋರಾಟ ಮಾಡುವಂತಹ ಸಂದರ್ಭಗಳು ಬರಬಹುದು. ಹಾಗಾಗಿ ಮಾದಿಗರು ಜಾಗೃತರಾಗಬೇಕೆಂದು ಎಚ್ಚರಿಸಿದರು.

   ಮಾಜಿ ಕೇಂದ್ರ ಸಚಿವ ಎ ನಾರಣಸ್ವಾಮಿ ಮಾತನಾಡಿ ಅಂಬೇಡ್ಕರ್ ರವರು ಎರಡು ಸೋಲನ್ನು ಅನುಭವಿಸಿದಾಗ ಯಾವುದೇ ರಾಜಕೀಯ ಪಕ್ಷ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಬಾಬು ಜಗಜೀವನ್ ರಾಮ್ ರವರು ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರ ನಾಯಕರಾಗುತ್ತಾರೆ, ಈ ದೇಶದ ಹಕ್ಕುಗಳ ಬಗ್ಗೆ ಹಾಗೂ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎನ್ನುವ ಉದ್ದೇಶದಿಂದ ಅವರನ್ನು ಎರಡು ಬಾರಿ ಸೋಲಿಸಿದರು.ರಾಜ್ಯದ ಶೋಷಿತ ವರ್ಗಕ್ಕೆ ಈ ದೇಶದ ಸಂಪತ್ತನ್ನು ಹರಿದು ಹಂಚುವ ಕಾಯಕಲ್ಪ ಮಾಡದಿದ್ದರೂ ಸಹ ಜಯಂತಿಗಳನ್ನು ಪ್ರತಿ ಹಳ್ಳಿಗಳಲ್ಲಿ ಆಚರಿಸುತ್ತಾರೆ. ಒಳ ಮೀಸಲಾತಿಗಾಗಿ ಯಾವ ಸಂಘಟನೆಗಳು ಹೋರಾಟ ನಡೆಸಲಿಲ್ಲ, ಒಳ ಮೀಸಲಾತಿಗಾಗಿ ವಿಧಾನಸಭಾ ಶಾಸಕರು ಕೂಡ ಧ್ವನಿ ಎತ್ತಲಿಲ್ಲ ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಾಯಕನಹಟ್ಟಿ ಹೋಬಳಿ ಮಾದಿಗ ಸೇವಾ ಟ್ರಸ್ಟ್ ಅಧ್ಯಕ್ಷ ಟಿ ಬಂಗಾರಪ್ಪ,ಕೆಪಿಸಿಸಿ ರಾಜ್ಯ ಸಂಚಾಲಕ ಹಾಗೂ ವಕೀಲರಾದ ಹಿರೇಹಳ್ಳಿ ಮಲ್ಲೇಶ್, ವಿಧಾನಸಭಾ ಸದಸ್ಯ ಕೆ ಎಸ್ ನವೀನ್, ಮುಖಂಡರಾದ ಪಟೇಲ್ ಜಿ ಎಂ ತಿಪ್ಪೇಸ್ವಾಮಿ, ಲೋಕಾಯುಕ್ತ ಅಧೀಕ್ಷಕ ಜಿ ಬಿ ಉಮೇಶ್ ಕುದಪುರ, ಕೆ ಟಿ ಕುಮಾರಸ್ವಾಮಿ, ಮೋಹನ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಚನ್ನಗನಹಳ್ಳಿ ಮಲ್ಲೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಪಟ್ಟಣ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪ್ರಕಾಶ್ ಮೂರ್ತಿ, ನಗರಸಭೆ ಸದಸ್ಯ ಕೆ ವಿರಭದ್ರಯ್ಯ, ಸಾಮಾಜಿಕ ಹೋರಾಟಗಾರ್ತಿ ಕೆ ಸಿ ಅಕ್ಷತಾ ಹಾವೇರಿ, ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಹೋರಾಟಗಾರ ಡಾ ಕೊಟ್ಟ ಶಂಕರ್, ಆರೋಗ್ಯ ಇಲಾಖೆ ಕುಂದಾಪುರ ತಿಪ್ಪೇಸ್ವಾಮಿ, ಸಾಮಾಜಿಕ ರಾಜಕೀಯ ವಿಶ್ಲೇಷಕರು ಅಂಬೇಡ್ಕರ್ ಚಿಂತಕರು ಕೋಡಿಹಳ್ಳಿ ಸಂತೋಷ್ ಹಿರಿಯೂರು, ಜೆಡಿಎಸ್ ಮುಖಂಡ ವೀರಭದ್ರಪ್ಪ, ಕರಿಬಸಪ್ಪ, ಡಿ ಓ ಮುರಾರ್ಜಿ, ಮುದಿಯಪ್ಪ, ಕೆ ಬಿ ನಾಗರಾಜ್, ದೇವರಹಳ್ಳಿ ರಾಜಣ್ಣ, ಕೆ ಪಿ ತಾರಕೇಶ್, ಬಿ ಶಂಕರ್ ಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶ್ರೀಕಾಂತ್, ಡಾ. ನಾಗರಾಜ್ ಮೀಸೆ, ಬಸಪ್ಪ ನಾಯಕ, ಬಗರ ಹುಕುಂ ಕಮಿಟಿ ಸದಸ್ಯ ಬೋರ ನಾಯಕ,
ಶಿವದತ್ತ, ಮನ್ಸೂರ್, ಗೌಡಗೆರೆ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣ, ಪತ್ರಕರ್ತ ನಿಂಗರಾಜ್, ಚಳ್ಳಕೆರೆ ನಗರಸಭಾ ಸದಸ್ಯ ಚಳ್ಳಕೆರಪ್ಪ, ಮುಖಂಡ ಎಂ ವೈ ಟಿ ಸ್ವಾಮಿ, ಓಬಳೇಶ್, ನಾಯಕನಹಟ್ಟಿ ಉಪನಿರೀಕ್ಷಕ ದೇವರಾಜ್ ಹಾಗ ಸಿಬ್ಬಂದಿಗಳು ಮತ್ತು ಸಮಸ್ತ ನಾಯಕನಹಟ್ಟಿ ಹೋಬಳಿ ಮಾದಿಗ ಸಮಾಜದ ಮುಖಂಡರುಗಳು ಹಾಜರಿದ್ದರು.

Recent Articles

spot_img

Related Stories

Share via
Copy link