ಅಭಿವೃದ್ಧಿಯಾಗದೆ ಅವನತಿಯತ್ತ ಸರ್ಕಾರಿ ಶಾಲೆ

ತುಮಕೂರು :

ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ, ಜಮೀನಿನ ಖಾತೆದಾರರ ಮನಸ್ತಾಪ ಗಳಿಂದ ಶಾಲೆಯೊಂದು ಅಭಿವೃದ್ಧಿಯಾಗದೆ ಅವನತಿಯ ಹಾದಿಯನ್ನು ಹಿಡಿದಿರುವ ಸನ್ನಿವೇಶ ತುಮಕೂರು ಗ್ರಾಮಾಂತರ ಪ್ರದೇಶದ ಅರೆಗುಜ್ಜನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ.

ಹೌದು,, ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಯಾಗಿದೆ ಎಂದು ಹೇಳಲಾಗುವ ಅರೆಗುಜ್ಜನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ ಮತ್ತು ಕಟ್ಟಡಗಳು ಮೂರು ಮಂದಿ ಖಾತೆದಾರರಿಗೆ ಸೇರಿದ್ದು, ಶಾಲೆಯ ಅಭಿವೃದ್ಧಿಗೆ ಇವರೇ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇಲ್ಲಿ ಬಹುತೇಕ ಹಿಂದುಳಿದ ವರ್ಗಗಳ, ಬಡತನದಲ್ಲಿ ಜೀವನ ನಡೆಸುವ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಆಗಲೂ ಈಗಲೂ ಕಟ್ಟಡ ಬೀಳುವಂತಹ ಸ್ಥಿತಿ ಇದ್ದರೆ, ಮಳೆ ಬಂದರೆ ಸಾಕು ನೀರೆಲ್ಲ ಒಳಗೆ ನುಗ್ಗಿ, ಕುಳಿತುಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಒಂದು ಕಡೆಯಾದರೆ ಹಾವು, ಚೇಳು ಸೇರಿದಂತೆ ಅನೇಕ ಅಪಾಯಕಾರಿ ಕ್ರಿಮಿಕೀಟಗಳು ಶಾಲೆಯೊಳಗೆ ಕಂಡುಬರುತ್ತವೆ.

ಈ ಶಾಲೆಯಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿ ಕೊಡಿ ಎಂದು ಶಾಸಕರಾದಿಯಾಗಿ ಜಿಲ್ಲಾಧಿಕಾರಿ ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಎಂದು ಎಂಬುದು ಗ್ರಾಮಸ್ಥರ ಆರೋಪ ವಾಗಿದೆ.

ಸರ್ಕಾರದಿಂದ ಶಾಲಾ ಅಭಿವೃದ್ಧಿಗಾಗಿ ಅನುದಾನಗಳು ಯೋಜನೆಗಳು ಬರುತ್ತಿವೆ ಆದರೆ ಈ ಭೂಮಿಯು ಶಾಲೆಯ ಹೆಸರಿಗೆ ಇಲ್ಲದೆ ಇದ್ದದ್ದು ಮತ್ತು ಇದು ಮೂರು ಮಂದಿ ಖಾತೆದಾರರಿಗೆ ಸಂಬಂಧಿಸಿದ್ದು ಆಗಿರುವುದರಿಂದ ಬಂದ ಯೋಜನೆಗಳನ್ನೆಲ್ಲ ಜಾರಿ ಮಾಡಲು ಇವರು ಅವಕಾಶ ಕೊಡುತ್ತಿಲ್ಲ, ಹೀಗಾಗಿ ಶಾಲೆ ಅಭಿವೃದ್ಧಿ ಹೊಂದುತ್ತಿಲ್ಲ ಎಂಬುದು ಆರೋಪವಾಗಿದೆ.

ಶಾಲೆಯ ದುರಸ್ತಿ ಕಾರ್ಯ ನಡೆಸಲು ಒಬ್ಬರು ಒಪ್ಪಿದರೆ ಮತ್ತೊಬ್ಬರು ಒಪ್ಪುವುದಿಲ್ಲ ಹೀಗಾಗಿ, ಇದನ್ನು ಕೈಬಿಟ್ಟು ಅರೆಗುಜ್ಜನಹಳ್ಳಿ ಪ್ರದೇಶದಲ್ಲಿಯೇ ಇರುವಂತಹ ಗೋಮಾಳ ಜಮೀನಿನಲ್ಲಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸಿಕೊಟ್ಟು, ಅಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ಕೊಡಬೇಕು ಎನ್ನುವುದು ಸ್ಥಳೀಯ ಗ್ರಾಮಸ್ಥರ ಆಗ್ರಹವಾಗಿದೆ.

ಹೆಚ್ಚಿನದಾಗಿ ಬಡ ಮಕ್ಕಳೇ ವಿದ್ಯಾಭ್ಯಾಸ ಮಾಡುವ ಇಲ್ಲಿ ಸುಸಜ್ಜಿತ ಶಾಲೆಯ ಅಗತ್ಯವಿದ್ದು, ಇದರ ಬಗ್ಗೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಹೆಜ್ಜೆ ಇಡಬೇಕಾಗುತ್ತದೆ ಎಂದು ಊರಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಅದೆಲ್ಲ ಏನೇ ಇದ್ದರೂ ಸರ್ಕಾರದ ಅನುದಾನಗಳು ಸಿಗುತ್ತಿಲ್ಲ ಎಂದು ಶಾಲೆಗಳು ಅಭಿವೃದ್ಧಿಯಾಗದೇ ಹಾಗೆ ಉಳಿದ ಉದಾಹರಣೆಗಳು ಒಂದುಕಡೆಯಾದರೆ, ಬಂದ ಯೋಜನೆಗಳನ್ನು, ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗದೆ ಬಾಳು ಬಿಡುವಂತಹ ಪರಿಸ್ಥಿತಿ ತುಮಕೂರು ಗ್ರಾಮಾಂತರ ಪ್ರದೇಶದ ಅರೆಗುಜ್ಜನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದ್ದಾಗಿದೆ.

ಈ ಬಗ್ಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿಸಿ ಗೌರಿಶಂಕರ್ ಅವರು ಕಾಳಜಿವಹಿಸಿ ಆದಷ್ಟು ಬೇಗ ಈ ಶಾಲೆಯನ್ನು ಸುವ್ಯವಸ್ಥಿತ ರೀತಿಯಲ್ಲಿ ಮಾಡಿಕೊಡಬೇಕಾಗಿ ಎನ್ನುವುದು ಪ್ರಗತಿ ವಾಹಿನಿಯ ಆಶಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap