ಈ ಬಾರಿ ಯಾವ ಯಾವ ಇಲಾಖೆಗೆ ಪೋಸ್ಟಲ್ ಬ್ಯಾಲೆಟ್….!

ಬೆಂಗಳೂರು:

     ಲೋಕಸಭಾ ಚುನಾವಣೆಯಲ್ಲಿ 12 ವಿವಿಧ ಇಲಾಖೆಗಳ ಅಗತ್ಯ ಸೇವೆಗಳ ಗೈರು ಮತದಾರರಿಗೆ ಅಂಚೆ ಮತದಾನ (ಪೋಸ್ಟಲ್ ಬ್ಯಾಲೆಟ್) ವ್ಯವಸ್ಥೆ ಕಲ್ಪಿಸುವ ಸಲುವಾಗಿ ಆಯಾ ಇಲಾಖೆಗಳಿಂದ ಪಟ್ಟಿ ನೀಡಲು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

    ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಬಿಬಿಎಂಪಿ ಚುನಾವಣಾ ವಿಶೇಷ ಆಯುಕ್ತ ಸೆಲ್ವಮಣಿ ಆರ್ ಅಗತ್ಯ ಸೇವೆಗಳ ಗೈರು ಮತದಾರರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲು ಆಯಾ ಇಲಾಖೆಗಳಿಂದ ಪಟ್ಟಿ ತಿಳಿಸಿದ್ದಾರೆ.

    ಚುನಾವಣಾ ಆಯೋಗವು 12 ವಿವಿಧ ಇಲಾಖೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಿದೆ ಮತ್ತು ಅವರು ಅಂಚೆ ಮತದಾನಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದರು. AVES ಅಡಿಯಲ್ಲಿ ಅರ್ಹ ಮತದಾರರು ಫಾರ್ಮ್ 12D ಅನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಶುಕ್ರವಾರದೊಳಗೆ (ಮಾರ್ಚ್ 22) ಸಲ್ಲಿಸಬೇಕು. ಅರ್ಹ ಮತದಾರರು ನೋಂದಣಿಯಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಅಂಚೆ ಮತದಾನ ಕೇಂದ್ರದಲ್ಲಿ ಮಾತ್ರ ಈ ಬಾರಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಅಂಚೆ ಮತಪತ್ರಗಳನ್ನು ಅಂಚೆ ಮೂಲಕ ವಿತರಿಸುವ/ ತಲುಪಿಸುವ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದರು.

ಅರ್ಹರು

ವಿದ್ಯುತ್ ಇಲಾಖೆ ,ಬಿ.ಎಸ್.ಎನ್.ಎಲ್ ,ರೈಲ್ವೆ ಇಲಾಖೆ,ಮಾಹಿತಿ ಇಲಾಖೆ,ಆಲ್ ಇಂಡಿಯಾ ರೇಡಿಯೋ, ಆರೋಗ್ಯ ಇಲಾಖೆ,ವಾಯುಯಾನ,ರಸ್ತೆ ಸಾರಿಗೆ ನಿಗಮ,ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಮತದಾನದ ದಿನದಂದು ಚುನಾವಣಾ ಪ್ರಸಾರಕ್ಕಾಗಿ ಭಾರತದ ಚುನಾವಣಾ ಆಯೋಗದಿಂದ ಅಧಿಕಾರ ಪಡೆದ ಮಾಧ್ಯಮ ವ್ಯಕ್ತಿಗಳು,ಸಂಚಾರ ಪೊಲೀಸ್,ಆಂಬ್ಯುಲೆನ್ಸ್ ಸೇವೆಗಳು.

Recent Articles

spot_img

Related Stories

Share via
Copy link
Powered by Social Snap