ಸರ್ಕಾರಿ ನೌಕರರೇ ಇದನ್ನು ಗಮನಿಸಿ…!

    ಇತ್ತೀಚಿಗೆ ಸರ್ಕಾರ ನೌಕರರ ಸಂಘಟನೆ ತಮ್ಮ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಕೆಲ ನಾಗರಿಕರು ಸರ್ಕಾರಿ ನೌಕರರ ಬಗ್ಗೆ ಅಂದರೆ ಇಲಾಖೆಗಳಲ್ಲಿ ನಡೆಯುವ ಅವ್ಯವಹಾರ ಹಾಗೂ ಕರ್ತವಲೋಪದ ಬಗ್ಗೆ ಅಸಮದನ ವ್ಯಕ್ತಪಡಿಸಿದ್ದು ಸಮಾಜಿಕ ಜಾಲತಾಣದಲ್ಲಿ ಬಂದಾಗ ಇದರ ಬಗ್ಗೆ ಪ್ರತಿಯಾಗಿ ಶಿಕ್ಷಕರು ಹಾಗೂ ನೌಕರರು ತಮ್ಮ ವೃತ್ತಿಯ ಬಗ್ಗೆ ಹಾಗೂ ಕೆಲ ನಾಗರಿಕರ ಅಸಮಾಧಾನದ ಬರವಣಿಗೆಗೆ ಪ್ರತಿಕ್ರಿಯೆ ಈ ರೀತಿ ನೀಡಿದರು.

     ಶಿಕ್ಷಕರು ತಾವು ಮಾಡುವ ಕರ್ತವ್ಯದ ಬಗ್ಗೆ ಸಾರ್ವಜನಿಕರು ಅಥವಾ ಪೋಷಕರು ಪ್ರಶ್ನೆ ಮಾಡಬಹುದು ಆದರೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆ ಮಾಡುವುದನ್ನು ವಿರೋಧಿಸುತ ಎಲ್ಲಾ ತಂದೆ ತಾಯಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಯಾವ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆ ಮಾಡುತ್ತಾರೋ ಅದೇ ರೀತಿ ನಾವು ಮಾಡುತ್ತೇವೆ ನಮ್ಮ ಮಕ್ಕಳ ಬಗ್ಗೆ ಯಾವ ರೀತಿ ಶಿಕ್ಷಣ ನೀಡಬೇಕು ಎಂಬುವುದು ನಮ್ಮ ಕರ್ತವ್ಯ ಇದನ್ನು ಪ್ರಶ್ನೆ ಮಾಡಬಾರದು.

     ಶಿಕ್ಷಣ ಇಲಾಖೆ ಏನು ನಮಗೆ ಕರ್ತವ್ಯ ತೋರಿಸ್ತಾರೆ ಅದನ್ನು ನಾವು ಮಾಡುವುದರ ಬಗ್ಗೆ ಲೋಪ ಇದ್ದರೆ ಪ್ರಶ್ನೆ ಮಾಡಬಹುದು ಎಂಬ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದರು. ಇದು ನಿಜ ಆದರೆ ಕೆಲ ನಾಗರಿಕರು ಪ್ರಶ್ನೆ ಮಾಡಿರುವುದು ಶಿಕ್ಷಣ ಇಲಾಖೆಯಲ್ಲಿ ಅಥವಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಕರ್ತವ್ಯವನ್ನು ಮಾಡಿದ್ದರೆ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆ ಮಾಡುವ ಅಗತ್ಯ ಬರುತ್ತಿರಲಿಲ್ಲ.

     ಸರ್ಕಾರಿ ಶಾಲೆಗಳಲ್ಲಿ ಸಮಯ ಪಾಲನೆ ಹಾಗೂ ಬೋಧನೆಯಲ್ಲಿ ಹೆಚ್ಚಾಗಿ ಕಾಳಜಿ ಹೆಚ್ಚಿನ ಶಿಕ್ಷಕರು ಮಾಡದ ಕಾರಣ ನಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳಿಗೆ ಸೇರ್ಪಡೆ ಮಾಡುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದ ಕಾರಣ ಮಾಡಿದ್ದಕ್ಕೆ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮ ಅಸಮಾಧಾನ ಎಂಬುದು ಕೆಲವು ಪೋಷಕರಿಂದ ಕೇಳಿ ಬರುತ್ತದೆ. ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆ ರೀತಿಯಲ್ಲಿ ಪ್ರಾಮಾಣಿಕತೆ ಇದ್ದಿದ್ದರೆ ಸರ್ಕಾರ ಶಾಲೆಯ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಸೇರ್ಪಡೆ ಮಾಡುತ್ತಿದ್ದರು ಎಂಬ ವಾದವನ್ನು ಸಹ ಇಡುತಾರೆ.

      ಸರ್ಕಾರಿ ಶಾಲೆಯಎಲ್ಲಾ ಶಿಕ್ಷಕರನ್ನು ಅಪ್ರಾಮಾಣಿಕರು ಎಂದು ಹೇಳುವುದಿಲ್ಲ ಆದರೆ ಶೇಕಡವಾರು ಹೆಚ್ಚಿನದಾಗಿ ಶಿಕ್ಷಕರಲ್ಲಿ ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ ಮಾಡದೆ ಅನ್ಯ ವೃತ್ತಿಯಲ್ಲಿ ತೊಡಗುವುದರಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ ಎಂಬುದು. ಹಾಗೂ ಇತ್ತೀಚಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಲವಾರು ಶಿಕ್ಷಕರನ್ನು ಅಮಾನತ್ತು ಮಾಡಿರುವುದು ಅವರ ಕರ್ತವ್ಯ ಲೋಪ ಮಾಡಿದ ಕಾರಣವೇ ಅಲ್ಲವೇ ಎಂಬುವುದು ಪೋಷಕರ ಮಾತುಗಳು ಕೇಳಿ ಬರುತ್ತದೆ.

    ಈ ಕಾರಣದಿಂದಲೇ ಸರ್ಕಾರಿ ನೌಕರರ ಪ್ರತಿಭಟನೆಯ ಸಮಯದಲ್ಲಿ ಅಸಮಾಧಾನ ಕೇಳಿ ಬಂದಿರುವುದು. ಇದನ್ನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರುಅರ್ಥ ಮಾಡಿಕೊಂಡು ತಮ್ಮ ವೃತ್ತಿಯನ್ನು ಗೌರವಿಸಲಿ ಹಾಗೂ ಸರ್ಕಾರಿ ಶಾಲೆಗಳಿಗೆ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಬರುವುದರಿಂದ ತಮ್ಮವೃತ್ತಿಯ ನೈಪುಣ್ಯತೆಯನ್ನು ತೋರಬೇಕಾಗಿದೆ.

    ಸರ್ಕಾರ ಸಮಾಜದ ಎಲ್ಲಾ ವರ್ಗದವರಿಗೂ ಒಂದೇ ರೀತಿಯಲ್ಲಿ ಶಿಕ್ಷಣ ತರಬೇಕಾದರೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮವನ್ನು ಜಾರಿಗೆ ತರಬೇಕು, ಆಗ ಎಲ್ಲ ವರ್ಗದವರಿಗೂ ಒಂದೇ ಶಿಕ್ಷಣ ನೀಡಲು ಸಾಧ್ಯ. ಸಮಾಜದಲ್ಲಿ ಉಳ್ಳವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಅಸಮಾನತೆ ಶಿಕ್ಷಣ ವ್ಯವಸ್ಥೆಯನ್ನು ನಿಲ್ಲಿಸಬೇಕಾಗಿದೆ. ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾ ಕರಣ ಮಾಡಿಕೊಂಡು ಏಕ ರೀತಿಯಲ್ಲಿ ಎಲ್ಲಾ ವರ್ಗದವರಿಗೂ ಶಿಕ್ಷಣ ನೀಡಬೇಕಾಗಿರೋದು ಸರ್ಕಾರದ ಕರ್ತವ್ಯ ಆಗಬೇಕು.

    ಇದು ಕೆಲ ಸರ್ಕಾರಿ ನೌಕರರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಏನೆಂದರೆ ನಾವು ಸರ್ಕಾರಿ ನೌಕರಿ ಪಡೆಯಬೇಕಾದರೆ ಹಗಲು ರಾತ್ರಿ ಓದಿ ಹೆಚ್ಚಿನ ಅಂಕಗಳನ್ನು ಪಡೆದು ನಾವು ಸರ್ಕಾರಿ ನೌಕರಿಗೆ ಬಂದಿದ್ದೇವೆ ನಮಗೆ ದೊರೆಯಬೇಕಾದ ವೇತನ ಸವಲತ್ತುಗಳನ್ನು ಪಡೆಯುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು, ನಿಜ ಸರ್ಕಾರಿ ನೌಕರಿ ಪಡೆಯಬೇಕಾದರೆ ಈ ಶ್ರಮ ಪಡೆದಿರುವುದು ನಿಜ, ಆದರೆ ನಿಮ್ಮ ರೀತಿಯಲ್ಲಿ ಶಿಕ್ಷಣ ಪಡೆಯುವಾಗ ಹಗಲು ರಾತ್ರಿ ಎನ್ನದೆ ಶಿಕ್ಷಣ ಪಡೆದವರು ಎಷ್ಟು ಜನ ಸರ್ಕಾರಿ ನೌಕರಿ ಪಡೆದಿಲ್ಲ ಎಂಬುದನ್ನು ಅರಿಯಬೇಕಾಗಿದೆ.

      ಸರ್ಕಾರಿ ನೌಕರಿ ಪಡೆಯುವ ಸಂದರ್ಭದಲ್ಲಿ ವಾಮ ಮಾರ್ಗ ಇಲ್ಲದೆ ನೌಕರಿ ಪಡೆದಿರುವವರು ಇದ್ದಾರೆ ಅದೇ ರೀತಿ ವಾಮ ಮಾರ್ಗದಿಂದ ಪಡೆದಿರುವವರು ಇದ್ದಾರೆ. ಇದು ಪ್ರಶ್ನೆ ಅಲ್ಲ . ಸಮಸ್ಯೆ ಏನೆಂದರೆ ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದಾಗ ಸರ್ಕಾರಿ ನೌಕರರು ಎಷ್ಟು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ ಎಂಬುದು ನಾಗರಿಕರ ಪ್ರಶ್ನೆ. ಪ್ರಾಮಾಣಿಕರು ಇರುವುದು ನಿಜ ಆದರೆ ಶೇಕಡವಾರು ಕಡಿಮೆ ಎನ್ನುವುದು ಸರ್ಕಾರಿ ನೌಕರರು ತಿಳಿಯಬೇಕಾಗಿದೆ ಹಾಗೂ ತಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

    ಅದೇ ರೀತಿ ಸರ್ಕಾರಿ ಅಧಿಕಾರಿಗಳು ಸರ್ಕಾರದ ಅನುದಾನಗಳನ್ನು ಯಾವ ರೀತಿ ಸದುಪಯೋಗ ಮಾಡುತ್ತಿದ್ದಾರೆ ಎಂಬುದು ಸಹ ನಾಗರಿಕರ ಪ್ರಶ್ನೆ. ಸರ್ಕಾರಿ ನೌಕರರು ಜನಪ್ರತಿನಿಧಿಗಳ ಮೇಲೆ ಕೆಲವು ಹೊಣೆಗಾರಿಕೆ ಮಾಡಬಹುದು ಆದರೆ ಇಲ್ಲಿ ಶಾಸಕಾಂಗ ಕಾರ್ಯಂಗ ಪ್ರಾಮಾಣಿಕತೆಯಲ್ಲಿ ನಡೆದಿದ್ದರೆ ಕೆಲ ನಾಗರಿಕರು ಸರ್ಕಾರ ನೌಕರರ ಮೇಲೆ ಪ್ರತಿಭಟನೆ ಸಂದರ್ಭದಲ್ಲಿ ತಮ್ಮ ಅಸಮಾಧಾನವನ್ನು ತೋಡಿಕೊಳ್ಳುತ್ತಿರಲಿಲ್ಲ ಎಂಬುದನ್ನು ಎಲ್ಲಾ ಸರ್ಕಾರಿ ನೌಕರರು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap