ಆಸ್ಪತ್ರೆಗಳಿಗೆ ಬಂತು ಮಹತ್ವದ ಆದೇಶ : ಏನಿದು ಹೊಸ ಆದೇಶ….!

ಬೆಂಗಳೂರು

     ಪ್ರಾಣಿ ಕಡಿತಕ್ಕೊಳಗಾದವರಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಆ್ಯಂಟಿ ರೇಬಿಸ್ ಲಸಿಕೆ’ ಮತ್ತು ‘ರೇಬಿಸ್‌ ಇಮ್ಯುನೋಗ್ಲಾಬ್ಯುಲಿನ್’ ಚುಚ್ಚು ಮದ್ದನ್ನು ಉಚಿತವಾಗಿ ನೀಡಬೇಕು ಎಂದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಸುತ್ತೋಲೆಯಲ್ಲಿ ರೇಬಿಸ್ ಮಾರಣಾಂತಿಕ ಕಾಯಿಲೆಯಾಗಿದ್ದರೂ ಸಮಯೋಚಿತ ಚಿಕಿತ್ಸೆಯಿಂದ ಪ್ರಾಣ ಉಳಿಸಬಹುದು. 2030ರ ವೇಳೆಗೆ ನಾಯಿ ಕಡಿತದಿಂದ ಬರುವ ರೇಬಿಸ್‌ ರೋಗವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ.

    ರಾಜ್ಯದಲ್ಲಿ ಈಗಾಗಲೇ ರೇಬಿಸ್ ರೋಗವನ್ನು ‘ಗುರುತಿಸಬಹುದಾದ ರೋಗ’ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಮಾರಣಾಂತಿಕ ರೇಬೀಸ್‌ನಿಂದ ಜೀವರಕ್ಷಿಸಬಲ್ಲ ಔಷಧಿಗಳಾದ ಆ್ಯಂಟಿ ರೇಬೀಸ್ ವ್ಯಾಕ್ಸಿನ್ ಮತ್ತು ರೇಬೀಸ್ ಇಮ್ಯೂನೋಗ್ಲಾಬಿಲಿನ್ ಗಳನ್ನು ಆಸ್ಪತ್ರೆಗೆ ಔಷಧಗಳನ್ನು ಪೂರೈಸುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್‌ಎಂಎಸ್‌ಸಿಎಲ್ )ದ ವಾರ್ಷಿಕ ಇಂಡೆಂಟ್ ಪೂರೈಕೆಯ ಭಾಗವಾಗಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

   ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಪರಿಗಣಿಸದೆ ಪ್ರಾಣಿ ಕಡಿತದ ಯಾವುದೇ ಸಂತ್ರಸ್ತರಿಗೆ ಚಿಕಿತ್ಸೆ ನಿರಾಕರಿಸದೆ ಅಗತ್ಯಕ್ಕೆ ಅನುಗುಣವಾಗಿ ಎಆರ್‌ವಿ ಮತ್ತು ಆರ್‌ಐಜಿ ಅನ್ನು ಉಚಿತವಾಗಿ ನೀಡುವಂತೆ ನಿರ್ದೇಶಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap