ನುಡಿದಂತೆ ನಡೆದ ರಾಜ್ಯ ಸರ್ಕಾರ …..!

ಬೆಂಗಳೂರು

      ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ 5 ಗ್ಯಾರಂಟಿಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸ್ತು ಎಂದಿದ್ದು, ಎಲ್ಲ ಗ್ಯಾರಂಟಿಗಳಿಗೆ ಸಮಯವಕಾಶದೊಂದಿಗೆ ಚಾಲನೆ ನೀಡಿದ್ದಾರೆ. ಗ್ಯಾರಂಟಿ ಸಂಬಂಧ ವಿಧಾನಸೌಧದಲ್ಲಿ ಕ್ಯಾಬಿನೆಟ್‌ ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾವು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಅದಕ್ಕಿಂತ ಮುಂಚಿತವಾಗಿ ನೀಡಿದ್ದ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವು. ಇದಕ್ಕೆ ನಮ್ಮ ಸಹಿ ಮಾಡಿ ಗ್ಯಾರಂಟಿ ಕಾರ್ಡ್ ನೀಡಿದ್ದೇವು.

     ನಾವು ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೇವು ಅದರಂತೆ ಎಲ್ಲ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದರು.  ಈ ಮಧ್ಯೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ದರು. ಮಾಧ್ಯಮಗಳಲ್ಲೂ ಚರ್ಚೆ ನಡೆದಿತ್ತು. ನಾವು 5 ಗ್ಯಾರಂಟಿಗಳಿಗೆ ನಾವು ಆಗಲೇ ಜಾರಿ ಆದೇಶ ಹೊರಡಿಸಿದ್ದೆವು. ಈಗಲೂ ಕ್ಯಾಬಿನೆಟ್‌ ಸಭೆಯಲ್ಲೂ ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ. 5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ.

    ಸಿದ್ದರಾಮಯ್ಯ ಕ್ಯಾಬಿನೆಟ್‌, ಬಲಿಷ್ಠ ಸರ್ಕಾರ ಅಧಿಕಾರಕ್ಕೆ: ಮಲ್ಲಿಕಾರ್ಜುನ ಖರ್ಗೆ ಇದು ಯಾವುದೇ ಜಾತಿ, ಧರ್ಮ, ಭಾಷೆಗಳ ತಾರತಮ್ಯವಿಲ್ಲದೆ ಜಾರಿ ಮಾಡುತ್ತೇವೆ. ಕರ್ನಾಟಕದ ಜನತೆಗೆ ಈ ಗ್ಯಾರಂಟಿ ಜಾರಿ ಮಾಡುತ್ತೇವೆ.

1. ಗೃಹಜ್ಯೋತಿ,

      200 ಯುನಿಟ್‌ ಉಚಿತ ವಿದ್ಯುತ್‌ ಇದು ಮೊದಲ ಗ್ಯಾರಂಟಿಯಾಗಿದೆ. ಇದು ಜಾರಿಗೂ ತೀರ್ಮಾನ ಮಾಡಿದ್ದೇವೆ. ಇದಕ್ಕೆ 12 ತಿಂಗಳ ಅವಧಿ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಶೇಕಡ 10 ಹೆಚ್ಚು ಮಾಡುತ್ತೇವೆ. 200 ಯುನಿಟ್‌ವರೆಗಿನ ವಿದ್ಯುತ್‌ ಬಳಸಿದರೆ ಶುಲ್ಕ ವಿಧಿಸಲ್ಲ. ಶೇಕಡ 70 ರಷ್ಟು ವಿದ್ಯುತ್‌ ಬಳಸಿದರೆ ಶೇಕಡ 10ರಷ್ಟು ಹೆಚ್ಚಿಸಿ ನೋಡುತ್ತೆವೆ. ಆಗಲು 200 ಯುನಿಟ್‌ ಬರಲಿಲ್ಲ ಎಂದರೆ ಶುಲ್ಕ ಇರಲ್ಲ. ಈ ತಿಂಗಳು ಬಿಲ್‌ ತಯಾರು ಆಗಿರುವುದರಿಂದ ಮುಂದಿನ ತಿಂಗಳು ಜುಲೈ 1ರಿಂದ ಇದು ಜಾರಿ ಬರಲಿದೆ. ಇಲ್ಲಿವರೆಗೂ (ಜುಲೈ) ಉಳಿಸಿರುವ ಬಾಕಿಯನ್ನು ಅವರೇ ಕಟ್ಟಬೇಕು. ಇಲ್ಲಿ ಬಾಡಿಗೆದಾರರಿಗೂ ಉಚಿತ ವಿದ್ಯುತ್‌ ಅನ್ವಯವಾಗುತ್ತದೆ ಎಂದರು.

2. ಗೃಹಲಕ್ಷ್ಮೀ ಯೋಜನೆ-

     ಇದಕ್ಕೆ ಬ್ಯಾಂಕ್‌ ಖಾತೆ, ಆಧಾರ್‌ ಸಂಖ್ಯೆ ಒದಗಿಸಬೇಕಾಗುತ್ತದೆ. ಮನೆ ಯಜಮಾನಿಗೆ ಈ ಗ್ಯಾರಂಟಿ ಅನ್ವಯವಾಗುತ್ತದೆ, ಅವರ ಖಾತೆಗೆ ಹಣ ಜಮೆ ಜೂನ್‌ 15ರಿಂದ ಜುಲೈ 15ವರೆಗೆ ಆನ್‌ಲೈನ್‌ ಅರ್ಜಿ ಹಾಕಬೇಕು. ಜುಲೈ 15 ಆಗಸ್ಟ್‌ 15ರವರೆಗೆ ಪರಿಶೀಲಿಸಿ ಅವರ ಪ್ರತಿ ತಿಂಗಳು ಖಾತೆಗೆ ಹಣ ಜಮೆ ಮಾಡುತ್ತೇವೆ. ಇದರಲ್ಲಿ ಬಿಪಿಎಲ್‌ ಹಾಗೂ ಎಪಿಎಲ್‌ ಎರಡಕ್ಕೂ ಅನ್ವಯವಾಗುತ್ತದೆ. 18 ವರ್ಷ ತುಂಬಿರುವ ಯಾರದರೂ ಯಜಮಾನಿಯು ಇದಕ್ಕೆ ಅರ್ಜಿ ಹಾಕಬಹುದು. ಇದಕ್ಕಾಗಿಯೇ ಅರ್ಜಿ ಕರೆಯುತ್ತಿದ್ದೇವೆ. ಇದಕ್ಕಾಗಿ ಖಾತೆ ಹಾಗೂ ಲಿಂಕ್‌ ಆಗಿರುವ ಆಧಾರ್ ಸಂಖ್ಯೆ ಮುಖ್ಯವಾಗಿರುತ್ತದೆ. ಇಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ತೆಗೆದುಕೊಳ್ಳುವವರು ಕೂಡ ಪರಿಗಣಿಸಲಾಗುತ್ತದೆ. ಅವರನ್ನು ಇಲ್ಲಿ ಕೈಬಿಡಲಾಗಲ್ಲ ಎಂದರು.

3. ಅನ್ನಭಾಗ್ಯ ಯೋಜನೆಯಡಿಯಲ್ಲಿ ನಾವು ಗ್ಯಾರಂಟಿ ನೀಡಿದಂತೆ ಆಹಾರ ಧಾನ್ಯಗಳನ್ನು ಜುಲೈ 1ರಂದು ಎಲ್ಲ ಬಿಪಿಎಲ್‌ ಕಾರ್ಡ್‌ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತಿಯೊಬ್ಬರಿಗೆ 10 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ.

4. ಶಕ್ತಿ ಗ್ಯಾರಂಟಿಯಡಿ ಎಲ್ಲ ಮಹಿಳೆಯರಿಗೆ ಅವರ ಸ್ಥಿತಿಗತಿಯನ್ನದೆ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಜೂನ್‌ 11ರಂದು ಜಾರಿ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಕರ್ನಾಟಕ ರಾಜ್ಯ ಒಳಗೆ ಮಾತ್ರ ಅನ್ವಯವಾಗುತ್ತದೆ. ಎಸಿ ಮತ್ತು ಲಕ್ಷುರಿ ಬಸ್‌ ಬಿಟ್ಟು ಎಲ್ಲ ಬಸ್‌ಗಳಿಗೂ ಅನ್ವಯವಾಗುತ್ತದೆ. ಇದು ಕರ್ನಾಟಕದವರಿಗೆ ಮಾತ್ರ ಅನ್ವಯವಾಗುತ್ತದೆ. ಇದು ಶೇಕಡ 90ರಷ್ಟು ಒಳಗೊಳ್ಳುತ್ತದೆ.

5. ಯುವನಿಧಿ ಗ್ಯಾರಂಟಿಯಡಿ 2022- 23ರಲ್ಲಿ ವ್ಯಾಸಂಗ ಮಾಡಿ ಪಾಸ್‌ ಆದ ಎಲ್ಲ ಪದವೀಧರರಿಗೆ ಪ್ರತಿ ತಿಂಗಳಿಗೆ 3,000 ರೂಪಾತಿ. ಡಿಪ್ಲೊಮೊ ಮಾಡಿರುವವರಿಗೆ 1,500 ರೂಪಾಯಿ 24 ತಿಂಗಳುಗಳ ವರೆಗೆ ನಿಧಿ ನೀಡಲಾಗುತ್ತದೆ. ಇಲ್ಲಿ 24 ತಿಂಗಳು ಮೊದಲೇ ಕೆಲಸ ಸಿಕ್ಕರೆ ಅವರಿಗೆ ಗ್ಯಾರಂಟಿ ಅಂತ್ಯವಾಗುತ್ತದೆ. ಇದಕ್ಕೆ ಎಲ್ಲ ಅರ್ಜಿ ಹಾಕಬೇಕಾಗುತ್ತದೆ. ಇಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಮಂಗಳಮುಖಿಯರನ್ನು ಸೇರಿದಂತೆ ನೀಡಲಾಗುತ್ತದೆ.

    ಪದವೀದರರು 180 ದಿನಗಳವರೆಗೆ ಕೆಲಸವಿಲ್ಲದಿರುವ 18ರಿಂದ 25 ವರ್ಷದವರಿಗೆ ಈ ಗ್ಯಾರಂಟಿ ಅನ್ವಯವಾಗುತ್ತದೆ ಎಂದರು. ಮೊದಲಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌, ನಮ್ಮ ಮಾತಿಗೆ ನಾವು ಬದ್ಧ. ಇದು ರಾಜ್ಯಕ್ಕೆ ಒಳ್ಳೆಯ ನಿರ್ಧಾರದ ಎಂದರು. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ 5 ಗ್ಯಾರಂಟಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಯಾಬಿನೆಟ್‌ ಸಚಿವರೊಂದಿಗೆ ಸಭೆ ನಡೆಸಿದರು.

    ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೃಹಶಕ್ತಿ, ಶಕ್ತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಹಾಗೂ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು. ಆದರೆ ಈಗ ಉಚಿತ ಬಸ್‌ ಪ್ರಯಾಣ ಹಾಗೂ ತಿಂಗಳಿಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಶಕ್ತಿ ಯೋಜನೆ ಜಾರಿಗೆ ಒತ್ತಡ ಹೆಚ್ಚುತ್ತಿತ್ತು. ಈ ಸಂಬಂಧ ಬುಧವಾರವೂ ಹಿರಿಯ ಅಧಿಕಾರಿಗಳು, ಇಲಾಖೆ ಕಾರ್ಯದರ್ಶಿಗಳು ಹಾಗೂ ಸಂಪುಟದ ಸಚಿವರೊಂದಿಗೆ ಕ್ಯಾಬಿನೆಟ್ ಮೀಟಿಂಗ್‌ ನಡೆದಿತ್ತು. ಆದರೆ ಯೋಜನೆಗಳ ಸಂಬಂಧ ರೂಪುರೇಷೆ ಸಿದ್ದವಾಗದ ಹಿನ್ನೆಲೆ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು. ಈ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು. ಬಳಿಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಧ್ಯಾಹ್ನ 1 ಗಂಟೆವರೆಗೂ ಕಾಯುವಂತೆ ತಿಳಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap