ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತರ ಕುಂದು ಕೊರತೆ ಸಭೆಯನ್ನು ಮಾಡಲಾಯಿತು.
ಸಾರ್ವಜನಿಕರೊಬ್ಬರು ಮಾತನಾಡಿ ಗುಬ್ಬಿ ತಾಲೂಕಿನಲ್ಲಿ ಅಧಿಕಾರಿಗಳಿಗೆ ಲೋಕಾಯುಕ್ತರ ಬಗ್ಗೆ ಸಲ್ಪವೂ ಭಯವಿಲ್ಲ, ಲೋಕಾಯುಕ್ತರಿಗೆ ಅರ್ಜಿ ನೀಡುತ್ತೇವೆ ಅಂದ್ರೆ ಕೊಡಿ ನೋಡೋಣ ಅವರು ಏನು ಮಾಡುತ್ತಾರೆ ಎಂಬ ಉಡಾಫೇ ಉತ್ತರ ನೀಡುತ್ತಾರೆ ಎಂದು ಲೋಕಾಯುಕ್ತರ ಮುಂದೆ ಅಳಲು ತೋಡಿ ಕೊಂಡರು.
ಕೃಷಿ ಇಲಾಖೆ, ತೋಟಗಾರಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಅಕ್ಷರ ದಾಸೋಹ ಇಲಾಖೆ ಸೇರಿದಂತೆ ತಾಲ್ಲೂಕಿನ ಕಚೇರಿಗಳ ಸಮಸ್ಯೆ ಸಾರ್ವಜನಿಕರಿಗೆ ಏನೆಲ್ಲಾ ಸೌಲಭ್ಯ ನೀಡುತ್ತಿದ್ದಾರೆ ಎಂದು ಮಾಹಿತಿ ಪಡೆದರು. ಲೋಕಾಯುಕ್ತರಿಗೆ ಅರ್ಜಿಗಳು ಸಲ್ಲಿಕೆಯಾದವು.ಎತ್ತಿನ ಹೊಳೆ ಯೋಜನೆಯಲ್ಲಿ ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ ಎಂಬ ದೂರುಗಳು ಬರುತ್ತಿವೆ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಅವರ ಸಮಸ್ಯೆ ಬಗ್ಗೆ ಹರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
