ಹೆಬ್ಬಳ್ಳಿ
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ, ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ, ಶಾಲೆಗೆ ಆಗಮಿಸಿದ, ಮಕ್ಕಳಿಗೆ, ಶಿಕ್ಷಕರು ದೀಪ ನೀಡಿ,ಸ್ವಾಗತಿಸಿದರು, ಇಸ್ಲಾಂ ಧರ್ಮ ಗುರು ಮೌಲಾನಾ ಶಾಕೀರಲಿ, ಈ ದಿನ ಇಡೀ ನಾಡಿನಾದ್ಯಂತ ಶಾಲೆಗಳು ಆರಂಭವಾಗಿವೆ, ಮಕ್ಕಳು ಇಂದಿನಿಂದ ಶಾಲೆಗೆ ಆಗಮಿಸಿ,
ಮಕ್ಕಳಿಗೆ ಸರಕಾರದಿಂದ ಸಿಗುವ ಉಚಿತ ಪಠ್ಯಪುಸ್ತಕ, ಸಮವಸ್ತ್ರಗಳು, ಬಿಸಿಊಟ, ಹಾಲು,ಶೂ ಸಾಕಷ್ಟು ಇತ್ಯಾದಿ ಸೌಲಭ್ಯಗಳನ್ನು ಪಡೆಯಬೇಕು ಎಂದರು. ನಾನು ಸಹ ಪ್ರತಿ ಶುಕ್ರವಾರ ಮಸೀದೆಯಲ್ಲಿ ಆಗಮಿಸುವ ಜನರಿಗೆ, ತಮ್ಮ ಆರು ವರ್ಷ ತುಂಬಿದ ಮಕ್ಕಳಿಗೆ ಶಾಲೆಗೆ ದಾಖಲು ಮಾಡಬೇಕು ಎಂದರು,
ಅಲ್ಪಸಂಖ್ಯಾತ ಮಕ್ಕಳು ಉರ್ದು ಭಾಷೆಯನ್ನು ಕಲಿಯಬೇಕು ಎಂದರು, ಮುಖ್ಯ ಶಿಕ್ಷಕಿ ಬಿ ಎಂ ಸುತಾರ ಮಾತನಾಡಿ, ನಮ್ಮ ಶಾಲೆಗೆ ಈಗಾಗಲೇ ಉಚಿತ ಸಮವಸ್ತ್ರಗಳು ಬಂದಿವೆ ಅವುಗಳನ್ನು ಇಂದೇ ವಿತರಿಸಲಾಗುವುದು,ಈ ವರ್ಷ ಕಲಿಕಾ ಬಲವರ್ಧನೆ ವರ್ಷವಾಗಿದ್ದು,
ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು, ಕನ್ನಡ ಶಿಕ್ಷಕ ಎಲ್ ಐ ಲಕ್ಕಮ್ಮನವರ, ಪಾಲಕರಾದ ಸೈದು ಮುಲ್ಲಾನವರ,ಅನ್ವರ್ ಜೋರಮನವರ, ಸುಭಾಸ ಚಿಲಕವಾಡ ಮುಂತಾದವರು ಹಾಜರಿದ್ದರು, ಸಹಶಿಕ್ಷಕಿ ಕೆ ಎಂ ಶಿವಳ್ಳಿ ನಿರೂಪಿಸಿ,ಸ್ವಾಗತಿಸಿ, ವಂದಿಸಿದರು,