ಬೆಂಗಳೂರು :
ರಾಜ್ಯಾದ್ಯಂತ ಮಹಾಮಾರಿ ಕೊರೊನಾ ಹರಡುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಟಿಸಿ ನೌಕರರಿಗೆ ರಜೆ ನೀಡಲು ಬಿಬಿಎಂಟಿಸಿ ನಿಗಮ ಮುಂದಾಗಿದೆ.
ಹೌದು, ಬಿಎಂಟಿಸಿಯಲ್ಲಿರುವ 50 ವರ್ಷ ಮೇಲ್ಪಟ್ಟ ನೌಕರರಿಗೆ ಹಾಗೂ ಮಧುಮೇಹ, ಶ್ವಾಸಕೋಶ, ಕಿಡ್ನಿ ತೊಂದರೆಗಳು ಹಾಗೂ ಇತರೆ ಅಪಾಯಕಾರಿ ಕಾಯಿಲೆಗಳಿಂದ ಬಳಲುತ್ತಿರುವ ಸರ್ಕಾರದ ನೌಕರರು ರಜೆ ಕೇಳಿದ್ದಲ್ಲಿ, ವೈದ್ಯಕೀಯ ಪ್ರಮಾಣ ಪತ್ರದ ಜೊತೆಗೆ ರಜೆ ಮಂಜೂರು ಮಾಡುವಂತೆ ಆದೇಶಿಸಲಾಗಿದೆ.
50 ವರ್ಷ ಮೇಲ್ಪಟ್ಟವರಲ್ಲಿ ಸೋಂಕು ಬೇಗ ಹರಡುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮೇರೆಯುತ್ತಿದ್ದು, ಈಗಾಗಲೇ ಕೆಲವು ಮಂದಿ ಈ ಸೋಂಕಿಗೆ ಒಳಗಾಗಿದ್ದಾರೆ. ಆದಕಾರಣ ಬೆಂಗಳೂರನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ