ನಿಡಗುಂದಿ.
ವರದಿ.ಮಹಬೂಬ ವಾಲಿಕಾರ.
ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ಆರಂಭೋತ್ಸವ ಅದ್ಧೂರಿಯಾಗಿ ಜರುಗಿತು.
ಶಾಲೆ ಮುಖ್ಯದ್ವಾರಕ್ಕೆ ಬಣ್ಣ ಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಶಾಲಾ ಪ್ರವೇಶ ದ್ವಾರದಿಂದ ಮಕ್ಕಳು ಒಳಬರುತ್ತಿದ್ದಂತೆ ಮಕ್ಕಳ ಬಾಯಿಗೆ ಸಿಹಿ ಹಾಕಿ ಸ್ವಾಗತಿಸಲಾಯಿತು.
ಇದೇ ಸಂದರ್ಭದಲ್ಲಿ ಎರಡು ಕೋಣೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭ ಮತ್ತು ೧೫೦ ಮಕ್ಕಳಿಗೆ ೮೦೦ ರೂ. ಮೌಲ್ಯದ ಸ್ಕೂಲ್ ಬ್ಯಾಗ್ ಉಚಿತವಾಗಿ ವಿತರಣೆ ಕಾರ್ಯಕ್ರಮ ಜರುಗಿತು.ತಾಪಂ ಇಒ ವೆಂಕಟೇಶ ವಂದಾಲ್, ತಾಲೂಕು ಬಿಸಿಯೂಟ ಅಧಿಕಾರಿ ಎಸ್.ಎಚ್.ಬಿರಾದಾರ, ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜು ರಾಥೋಡ್, ಎಸ್ಡಿಎಂಸಿ ಅಧ್ಯಕ್ಷ ಪಂಡಿತ ರಾಥೋಢ, ಪಾಂಡು ಚೌಹಾಣ್, ಮುಖ್ಯಗುರು ಆರ್.ಎ.ನದಾಫ್, ಶಿಕ್ಷಕ ಎಂ.ಎಚ್.ಲಷ್ಕರಿ, ದಸ್ತಗೀರ ಬಾಗೇವಾಡಿ ಇತರರಿದ್ದರು.
