ತೆಹ್ರಾನ್
ಸದ್ಯ ದೇಶದ ಅತ್ಯಂತ ಪ್ರಭಾವ ಶಾಲಿ ಹಾಗು ಸಮರ್ಥ ಸೆನಾ ನಾಯಕನನ್ನು ಕಳೆದು ಕೊಂಡು ದುಖಃ ದಲ್ಲಿರುವ ಇರಾನ್ ನ ಬುಶೆಹರ್ ನಲ್ಲಿನ ಪರಮಾಣು ವಿದ್ಯುತ್ ಸ್ಥಾವರದ ಬಳಿ ಇಂದು ಭೂಕಂಪ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲಾಗಿದೆ. ಇನ್ನೊಂದೆಡೆ ಟೆಹ್ರಾನ್‌ನಿಂದ ಹೊರಟಿದ್ದ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿ 180 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.ಇದೀಗ ಭೂಕಂಪವೂ ಕೂಡ ಸಂಭವಿಸಿದ್ದು, ಇರಾನ್ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಭೂಕಂಪವು ಬೊರಝಾನ್ ನಗರದಿಂದ ಆಗ್ನೇಯಕ್ಕೆ 10 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
