ಬೆಂಗಳೂರು
ಇತ್ತೀಚೆಗೆ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅರವಳೆ) ಪಕ್ಷವು ವಿರೋಧಿಸುತ್ತದೆ.ಈ ಮಸೂದೆಯು ಭಾರತ ಸಂವಿಧಾನದ 243ಎ ಆರ್ಟಿಕಲ್ ನ ಉಲ್ಲಂಘನೆಯಾಗಿದೆ.
ಪೌರಾಡಳಿತ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಬಾರದೆಂಬ ಸಂವಿಧಾನದ ಆಶಯಕ್ಕೆ ಈ ಮಸೂದೆಯು ನೂ ತಮಗೆ ಬೇಕಾದವರನ್ನು ವಾರ್ಡ್ ಪ್ರತಿನಿಧಿಗಳನ್ನಾಗಿ ನೇಮಕ ಮಾಡಿಕೊಳ್ಳುವ ಅವಕಾಶವಿರುವುದರಿಂದ ಜನ ಪ್ರತಿನಿಧಿ ಆಯ್ಕೆ ಆಶಯಕ್ಕೆ ಅಡ್ಡಿಯಾಗುತ್ತದೆ.ಇದರಿಂದ ಮತದಾರರ ದನಿಯನ್ನು ಧಮನಿಸುವ ಹುನ್ನಾರವು ಈ ಮಸೂದೆಯಲ್ಲಿ ಅಡಗಿದೆ.ಈ ಮೂಲಕ ಮಹಾನಗರಪಾಲಿಕೆಯ ಆಡಳಿತವು ಶಾಸಕರಿಂದ ಮತ್ತು ರಾಜ್ಯಸರ್ಕಾರದಿಂದ ನಿಯಂತ್ರಣಕ್ಕೆ ಒಳಪಡುತ್ತದೆ.
ಮಹಾನಗರಪಾಲಿಕೆಯ ಅಡಳಿತದಲ್ಲಿ ನಗರ ನಾಗರಿಕರ ಭಾಗವಹಿಸುವಿಕೆಯು ಮೊಟಕುಗೊಳಿಸಿದಂತಾಗುತ್ತದೆ.ನಗರ ಆಡಳಿತದ ಪಾರದರ್ಶಕತೆಗೆ ರಾಜ್ಯ ಸರ್ಕಾರದಿಂದ ಅಡ್ಡಿಯುಂಟಾಗುತ್ತದೆ.ಬೆಂಗಳೂರಿನ ಸಮಸ್ತ ಬಡವರ ಬದುಕನ್ನು ಹತ್ತಿಕ್ಕುವ ಮತ್ತು ಕಾರ್ಪೋರೆಟ್ ಕಂಪನಿಗಳ ಅಧಿಪತ್ಯವನ್ನು ಎತ್ತಿಹಿಡಿಯುತ್ತದೆ.ವಿಶಾಲ ಬೆಂಗಳೂರಿನ ಆಡಳಿತಕ್ಕಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಎಂಟು ವಿಭಾಗಗಳ ಸಂಖ್ಯೆಯನ್ನು ಇನ್ನು ಹೆಚ್ಚಿನ ಸಂಖ್ಯೆಗೆ ಹೆಚ್ಚಿಸಿದರೆ ಆಡಳಿತವು ಸುಲಲಿತವಾಗಿ ನಡೆದು ವಾರ್ಡ್‌ಗಳ ಜನಪ್ರತಿನಿಧಿಗಳ ಹಿಡಿತಕ್ಕೆ ಸಿಕ್ಕಿ ಜನಾಡಳಿತಕ್ಕೆ ಅವಕಾಶವಾಗುತ್ತದೆ ಎಂಬ ಸತ್ಯವನ್ನು ರಾಜ್ಯ ಸರ್ಕಾರವು ಅರ್ಥ ಮಾಡಿಕೊಳ್ಳಬೇಕೆಂದು ಈ ನಮ್ಮ ಪ್ರತಿಭಟನೆಯ ಮೂಲಕ ಆಗ್ರಹಿಸುತ್ತೇವೆ.
ಮಹಾನಗರಪಾಲಿಕೆ ವಾರ್ಡ್ ಗಳ ಅಧಿಕಾರವನ್ನು ಬಲಗೊಳಿಸುವ ಮತ್ತು ಚುನಾಯಿತ ಕಾರ್ಪೋರೇಟರ್ ಗಳು ಸ್ವತಂತ್ರವಾಗಿ ಪಾಲಿಕೆಯ ಆಡಳಿತದಲ್ಲಿ ಭಾಗಿಯಾಗಲು ಇಂದಿನ ಮಸೂದೆಯು ವಿರೋಧವಾಗಿರುವುದರಿಂದ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ- 2024’ನ್ನು ವಿರೋಧಿಸಿ ದಿನಾಂಕ 16.03.2025ರ ಬೆಳಿಗ್ಗೆ:11.30ಕ್ಕೆ ಪ್ರೀಥಂಪಾರ್ಕ್ ನಲ್ಲಿ ಏರ್ಪಡಿಸಿರುವ ಪ್ರತಿಭಟನೆಯಲ್ಲಿ ನಾಗರಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಜನವಿರೋಧಿ ಆಡಳಿತ ಮಸೂದೆಯನ್ನು ಅಂಗೀಕರಿಸಭಾರದೆಂದು ರಾಜ್ಯ ಸರ್ಕಾರವನ್ನು ಆರ್.ಪಿ.ಐ. ಒತ್ತಾಯಿಸುತ್ತಿದೆ.ಸಭೆಯಲ್ಲಿ ಕಾರ್ಯದರ್ಶಿ ವೆಂಕಟಸ್ವಾಮಿ, ಕರ್ನಾಟಕ ಕಾರ್ಮಿಕ ಪರಿಷತ್ತು ಅಧ್ಯಕ್ಷ ಬೈಂದೂರು ರವಿ ಶೆಟ್ಟಿ, ಗೋಪಾಲ್ , ಡಾ. ಆರ್ ಚಂದ್ರಶೇಖರ್, ಎಬಿ ಹೊಸಮನೆ, ಅಂಬರೀಶ್, ನಾಗು ಸೇರಿದಂತೆ ಉಪಸ್ಥಿತರು.
