ಗೃಹಲಕ್ಷ್ಮಿ ಹಣ ಬರೋದಾದ್ರು ಯಾವತ್ತು ಗೊತ್ತಾ….!?

ಬೆಂಗಳೂರು :

    ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗದ ವಿಚಾರ ಕಳೆದ ಕೆಲವು ತಿಂಗಳುಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷವು ಜನರನ್ನು ವಂಚಿಸುತ್ತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಟೀಕಿಸಿದ್ದವು.

  ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಹಣ ವರ್ಗಾವಣೆಯಾಗುತ್ತಿದೆ. ಖಂಡಿತವಾಗಿಯೂ ಸರ್ಕಾರವು 2000 ರೂ. ವರ್ಗಾವಣೆ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದರು.

   ಪ್ರತಿ ತಿಂಗಳಿಗೊಮ್ಮೆ ಖಾತೆ ಸೇರಬೇಕಿದ್ದ ಗೃಹಲಕ್ಷ್ಮಿ ಹಣ ಇದೀಗ ಮೂರು ತಿಂಗಳು ವಿಳಂಬವಾಗುತ್ತಿದೆ, ಜನ ಅಂತೂ ದುಡ್ಡು ಈ ತಿಂಗಳು ಬರುತ್ತೆ, ಇನ್ನೇನು ಮುಂದಿನ ತಿಂಗಳು ಬರಬಹುದು ಎಂದು ಕಾದು ಕಾದು ಸುಸ್ತಾಗಿದ್ದಾರೆ. ಜುಲೈ ತಿಂಗಳು ಹಾಗೂ ಆಗಸ್ಟ್‌ ತಿಂಗಳಿನ ಗೃಹಲಕ್ಷ್ಮಿ ಹಣ ಇನ್ನೂ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ. ಈಗ ಸಪ್ಟೆಂಬರ್‌ ತಿಂಗಳ ಮಧ್ಯದಲ್ಲಿದ್ದು, ಈ ತಿಂಗಳ ಹಣ ಸೇರಿಸಿದರೆ, ಒಟ್ಟು ಮೂರು ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ. ಅಂದರೆ ಒಟ್ಟು ರೂ. 6000 ಹಣ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ.

   ಇದೀಗ ಕೊನೆಗೂ ಮೂರು ತಿಂಗಳ ಹಣದ ಬಿಡಿಗಡೆಯ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಹತ್ವದ ಸುಳಿವು ನೀಡಿದ್ದಾರೆ. ಶೀಘ್ರವೇ ಗೃಹಿಣಿಯರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಣಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರ ಅಂದಾಜು 25000 ಕೋಟಿಯನ್ನು ಬಿಡುಗಡೆ ಮಾಡಿದೆ.

   ಗೃಹಲಕ್ಷ್ಮಿ ಯೋಜನೆ ಒಂದು ಮಹತ್ವಾಕಾಂಕ್ಷೆಯ ಯೋಜನೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಸಿಎಂ ಬಳಿಯೂ ಹಣ ಬಿಡುಗಡೆ ವಿಚಾರವಾಗಿ ಮಾತುಕತೆ ನಡೆಸಿದ್ದೇನೆ. ತಾಂತ್ರಿಕ ದೋಷವಾದಾಗ ಹಚ್ಚುಕಡಿಮೆ ಆಗುತ್ತದೆ. ಹಾಗೆಂದು ಹಣ ವರ್ಗಾವಣೆ ಮಾಡಿಯೇ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link