ಬೆಳಗಾವಿ : ಕಾರು ಅಪಘಾತ ; ಇಬ್ಬರು ಮಹಿಳೆಯರ ಸಾವು!!

ಬೆಳಗಾವಿ: 

     ರಾತ್ರಿ ಊಟ ಮಾಡಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯರಿಬ್ಬರು  ಕಾರು ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮುತಗಾ- ನಿಲಜಿ ನಡುವಿನ ಬಾಚಿ- ರಾಯಚೂರು ರಾಜ್ಯ ಹೆದ್ದಾರಿ ಬದಿಯಲ್ಲಿ ನಡಿದಿದೆ.

      ಮುತಗಾ ಗ್ರಾಮದ ಪ್ರಭಾವತಿ ಕಾಲೊನಿಯ ಸವಿತಾ ಬಾಲಕೃಷ್ಣ ಪಾಟೀಲ (44) ಹಾಗೂ ವಿದ್ಯಾ ಬಾವು ಪಾಟೀಲ (48) ಮೃತರು.

      ಬೆಳಗಾವಿಯಿಂದ ಸಾಂಬ್ರಾ ಕಡೆಗೆ ಬಿಜೆಪಿ ಯುವ ಮೋರ್ಚಾ ಮುಖಂಡ ಯುವರಾಜ ಜಾಧವ ಎಂಬಾತ ಕಾರು ಚಲಾಯಿಸಿಕೊಂಡು ಬರುತಿದ್ದಾಗ ಕಾರು ನಿಯಂತ್ರಣ ತಪ್ಪಿದೆ ಈ ಸಂದರ್ಭ ರಸ್ತೆ ಪಕ್ಕದಲ್ಲಿ ವಾಕಿಂಗ್ ಮಾಡುತಿದ್ದ ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿ ಮನೆಯೊಂದಕ್ಕೆ‌ ಡಿಕ್ಕಿ ಹೊಡೆದು ನಿಂತಿದೆ. 

      ಸ್ಥಳಕ್ಕೆ ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಇನ್‌ಸ್ಪೆಕ್ಟರ್ ವಿಜಯಕುಮಾರ ಶಿನ್ನೂರ ಭೇಟಿ ನೀಡಿ ಪರಿಶೀಲಿಸಿದರು. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ