ಉ.ಪ್ರದೇಶ : 10ರಲ್ಲಿ ಅರಳಿದ ಕಮಲ ,ತನ್ನ 2 ಸ್ಥಾನ ಭದ್ರ ಪಡಿಸಿಕೊಂಡ ಎಸ್‌ ಪಿ

ಲಖನೌ:

    ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ಮಂಗಳವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತರೂಢ ಬಿಜೆಪಿ 10 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷ ಸಮಾಜವಾದಿ ಪಕ್ಷದ ಏಳು ಶಾಸಕರು ಆಡಳಿತ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಡ್ಡ ಮತದಾನ ಮಾಡಿ, ದೊಡ್ಡ ಆಘಾತ ನೀಡಿದ್ದಾರೆ.

   ಅಭಯ್ ಸಿಂಗ್, ರಾಕೇಶ್ ಪ್ರತಾಪ್ ಸಿಂಗ್, ರಾಕೇಶ್ ಪಾಂಡೆ, ಮನೋಜ್ ಪಾಂಡೆ(ಎಸ್‌ಪಿ ಮುಖ್ಯ ಸಚೇತಕ), ಅಶುತೋಷ್ ಮೌರ್ಯ, ವಿನೋದ್ ಚತುರ್ವೇದಿ ಮತ್ತು ಪೂಜಾ ಪಾಲ್ ಸೇರಿದಂತೆ ಏಳು ಎಸ್‌ಪಿ ಶಾಸಕರು ಬಂಡಾಯವೆದ್ದು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಇದಲ್ಲದೆ, ಒಬ್ಬ ಎಸ್‌ಪಿ ಶಾಸಕ ಮಹಾರಾಜಿ ದೇವಿ ಅವರು ಮತದಾನಕ್ಕೆ ಗೈರಾಗುವ ಮೂಲಕ ಆಡಳಿತ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಾಯ ಮಾಡಿದ್ದಾರೆ.

    ಆಡಳಿತಾರೂಢ ಬಿಜೆಪಿಯು ರಾಜಾ ಭಯ್ಯಾ ನೇತೃತ್ವದ ಜನಸತ್ತಾ ದಳ-ಲೋಕತಾಂತ್ರಿಕ್‌ನ ಇಬ್ಬರು ಶಾಸಕರು ಮತ್ತು ಬಿಎಸ್‌ಪಿ ಏಕೈಕ ಶಾಸಕ ಉಮಾಶಂಕರ್ ಸಿಂಗ್ ಅವರ ಬೆಂಬಲವನ್ನೂ ಪಡೆದುಕೊಂಡಿದೆ. ಇದರೊಂದಿಗೆ ಯುಪಿಯಲ್ಲಿ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸಮಾಜವಾದಿ ಪಕ್ಷದ ಮೂವರು ಅಭ್ಯರ್ಥಿಗಳಲ್ಲಿ ಇಬ್ಬರು ಮಾತ್ರ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.

    ಸುಧಾಂಶು ತ್ರಿವೇದಿ, ಸಾಧನಾ ಸಿಂಗ್, ಸಂಗೀತಾ ಬಲ್ವಂತ್, ಅಮ್ರಪಾಲ್ ಮೌರ್ಯ, ಚೌಧರಿ ತೇಜ್‌ವೀರ್ ಸಿಂಗ್ ಮತ್ತು ನವೀನ್ ಜೈನ್ ಸೇರಿದಂತೆ ಎಂಟು ವಿಜೇತ ಅಭ್ಯರ್ಥಿಗಳ ಪೈಕಿ ಆರು ಅಭ್ಯರ್ಥಿಗಳು ತಲಾ 38 ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಒಟ್ಟು 294 ಮತಗಳನ್ನು ಪಡೆದಿದೆ.

    ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಟರ್ನ್‌ಕೋಟ್ ಆರ್‌ಪಿಎನ್ ಸಿಂಗ್ 37 ಮತಗಳನ್ನು ಪಡೆದರೆ, ಬಿಜೆಪಿಯ 8ನೇ ಅಭ್ಯರ್ಥಿ ಸಂಜಯ್ ಸೇಠ್ 29 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರು. ಮತ್ತೊಂದೆಡೆ, ಎಸ್‌ಪಿ 100 ಮತಗಳನ್ನು ಪಡೆದಿದ್ದು, ಜಯಾ ಬಚ್ಚನ್ 41 ಮತ್ತು ರಾಮ್‌ಜಿಲಾಲ್ ಸುಮನ್ 40 ಮತಗಳನ್ನು ಪಡೆದರು. ಮೂರನೇ ಎಸ್‌ಪಿ ಅಭ್ಯರ್ಥಿ ಮತ್ತು ಯುಪಿ ಮಾಜಿ ಮುಖ್ಯ ಕಾರ್ಯದರ್ಶಿ ಅಲೋಕ್ ರಂಜನ್ ಅವರು ಕೇವಲ 19 ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದರು.

Recent Articles

spot_img

Related Stories

Share via
Copy link
Powered by Social Snap