ಮೈಸೂರು:
ಜೆಡಿಎಸ್ ಪಕ್ಷದ ಶಾಸಕ ಮತ್ತು ಹಿರಿಯ ರಾಜಕಾರಣಿ ಜಿಟಿ ದೇವೇಗೌಡ ಈಗ ಕಾಂಗ್ರೆಸ್ ಮುಖಂಡನಂತೆ ಮಾತಾಡುತ್ತಿದ್ದಾರೆ. ಮುಂದೊಂದು ದಿನ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗೋದು ನಿಶ್ಚಿತ, ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ಅವರು ಕೆಲಸ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಹೇಗೆ ಶಿವಕುಮಾರ್ ಬೆಂಬಲ ನೀಡಿದ್ದರೋ ಸಿದ್ದರಾಮಯ್ಯ ಸಹ ಆ ಋಣವನ್ನು ತೀರಿಸಲಿದ್ದಾರೆ ಎಂದು ದೇವೇಗೌಡ ಹೇಳಿದರು. ಮುಖ್ಯಮಂತ್ರಿಯಾಗಲು ಎಲ್ಲ 138 ಕಾಂಗ್ರೆಸ್ ಶಾಸಕರ ಬೆಂಬಲ ಬೇಕು, ಹತ್ತಿಪ್ಪತ್ತು ಶಾಸಕರನ್ನು ಕಟ್ಟಿಕೊಂಡು ಸಿಎಂ ಅಗೋದು ಸಾಧ್ಯವಿಲ್ಲ ಅಂತ ಅವರು ಶಿವಕುಮಾರ್ ಕುರಿತು ಹೇಳಿದಂತಿತ್ತು.
