ಬುದ್ಧ,ಬಸವ, ಅಂಬೇಡ್ಕರ್, ವಾಲ್ಮೀಕಿ ಹೆಸರಲ್ಲಿ ಕೆಎನ್ ಆರ್ ಪ್ರಮಾಣ ವಚನ

ತುಮಕೂರು:

      ಸಿದ್ದರಾಮಯ್ಯ ಅವರ ಸರ್ಕಾರ ದಲ್ಲಿ ಸಂಪುಟ ದರ್ಜೆ ಸಚಿವರಾಗಿ ಶನಿವಾರ ಮಧುಗಿರಿ ಶಾಸಕ ಕೆ. ಎನ್. ರಾಜಣ್ಣ ಅವರು ಪ್ರಮಾಣ ವಚನ ಸ್ವೀಕರಿಸಿದರು.

      ಜಿಲ್ಲೆಯಲ್ಲಿ ದಾಖಲೆ ಅಂತರದಲ್ಲಿ ಮಧುಗಿರಿ ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೆ. ಎನ್. ರಾಜಣ್ಣ ಅವರು ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಹೆಸರಲ್ಲಿ ಪ್ರಮಾಣ ವಚನ ಗೋಪ್ಯತಾ ವಿಧಿ ಸ್ವೀಕರಿಸಿದರು.

      ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆ. ಎನ್. ರಾಜಣ್ಣ ಅವರಿಗೆ ಅವರ ಆಸಕ್ತಿ ಯ ಸಹಕಾರ ಖಾತೆ ಸಿಗುವುದು ನಿಶ್ಚಿತ ವೆನಿಸಿದ್ದು,ಕೆಎನ್ಆರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅ ವರ ಅಭಿಮಾನಿಗಳು ತುಮಕೂರು ಹಾಗೂ ಮಧುಗಿರಿಯಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.ಪರಿಶಿಷ್ಟ ಪಂಗಡ ನಾಯಕ ಸಮುದಾಯಕ್ಕೆ ಸೇರಿದ ಕೆ. ಎನ್. ರಾಜಣ್ಣ ಅವರು ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸದೆ ಸಾಮಾನ್ಯ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆ ಯಾಗಿರುವುದು ಅವರ ಜನಾನುರಾಗಿ ವ್ಯಕ್ತಿ ತ್ವಕ್ಕೆ ಸಾಕ್ಷಿ.

     ಕ್ಯಾತ್ಸಂದ್ರ ಟೌನ್ ಪಂಚಾಯತ್ ಅಧ್ಯಕ್ಷ ಸ್ಥಾನ ದಿಂದ ರಾಜಕೀಯ ವಾಗಿ ಒಂದೊಂದೇ ಮೆಟ್ಟಿಲೇರುತ್ತಾ ಬಂದ ಕೆಎನ್ಆರ್ ಅವರು1998ರಲ್ಲಿ ಎಂಎಲ್ಸಿ,, 2004ರಲ್ಲಿ ಬೆಳ್ಳಾವಿ ಶಾಸಕರಾಗಿ ಪ್ರಥಮ ಬಾರಿಗೆ ಆಯ್ಕೆ ಯಾದರು. 2013ರಲ್ಲಿ ಮಧುಗಿರಿ ಯಿಂದ ಶಾಸಕರಾಗಿ ಆಯ್ಕೆ ಯಾದರು. 2018ರಲ್ಲಿ ಪರಾಭವಗೊಂಡರೂ ಮತ್ತೆ ಮಧುಗಿರಿ ಕ್ಷೇತ್ರದ ಜನರ ನಿರಂತರ ಸಂಪರ್ಕ, ಜನಸೇವೆ ಮಾಡುತ್ತಾ 2023ರಲ್ಲಿ ದಾಖಲೆ ಮತಗಳಿಂದ ಆಯ್ಕೆ ಯಾದರು.

    ಹಾಲಿ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರೂ ಆಗಿರುವ ಕೆಎನ್ಆರ್ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ರಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿದ್ದರು. ಸಹಕಾರ ರತ್ನ ಪ್ರಶಸ್ತಿ ಗೂ ಭಾಜನರಾಗಿದ್ದಾರೆ

    ಕೆ. ಎನ್. ರಾಜಣ್ಣ ಅವರು ಸಂಪುಟ ಸೇರ್ಪಡೆ ಯೊಂದಿಗೆ ಹಿರಿಯ ಸಚಿವ ಡಾ. ಜಿ. ಪರಮೇಶ್ವರ್ ಸೇರಿ ಇಬ್ಬರಿಗೆ ಸಚಿವ ಸ್ಥಾನ ದೊರೆ ತಂತಾಗಿದೆ. ನೂತನ ಸಚಿವ ಕೆಎನ್ಆರ್ ಅವರನ್ನು ಸಚಿವ ಡಾ. ಜಿ. ಪರಮೇಶ್ವರ್ ಅವರ ನಿವಾಸದಲ್ಲಿ ಅಭಿನಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap