ಗ್ರಾ.ಪಂ. ಅಧಿಕಾರಿಗಳು ಹಳ್ಳಿ ಹಳ್ಳಿಗಳಲ್ಲಿ ಸ್ಯಾನಿಟೈಸಿಂಗ್ ಮಾಡಿಸಿ

ಎಂ.ಎನ್.ಕೋಟೆ : 

ಗುಬ್ಬಿ ತಾಲ್ಲೂಕಿನ ಹಾಗಲವಾಡಿ, ಚೇಳೂರು, ಬಿದರೆ, ನಿಟ್ಟೂರು, ಕಡಬ, ಸಿ.ಎಸ್.ಪುರ ಹಾಟ್ ಸ್ಪಟ್ ಪ್ರದೇಶಗಳಿಗೆ ಶುಕ್ರವಾರ ತಹಸೀಲ್ದಾರ್ ಪ್ರದೀಪ್ ಕುಮಾರ್ ಹೀರೆಮಠ್ ಭೇಟಿ ನೀಡಿ ಪರಿಶೀಲಿಸಿದರು.

      ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಹೆಚ್ಚಿನ ಸೋಂಕಿತರು ಜಾಸ್ತಿ ಇರುವುದರಿಂದ ಈಭಾಗದಲ್ಲಿ ಹೆಚ್ಚು ನಿಗಾವಹಿಸಲಿದ್ದು. ಈ ಭಾಗದಲ್ಲಿ ಅನವಶ್ಯಕವಾಗಿ ಜನರು ಮನೆಯಿಂದ ಹೊರಬಾರದು ಅವಶ್ಯಕತೆ ಇದ್ದಾರೆ ಮಾತ್ರ ಮನೆಯಿಂದ ಹೊರಬನ್ನಿ ಈ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗಿರುವುದರಿಂದ ಸೋಂಕು ಇರುವ ರೋಗಿಗಳು ಒಂದು ವಾರದ ಕಾಲ ಹೊಂ ಕ್ವಾರಟೈಂನ್ ನಲ್ಲಿ ಇರಬೇಕು.ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಳ್ಳಿ ಹಳ್ಳಿಗಳಲ್ಲಿ ಸ್ಯಾನಿಟೈಸಿಂಗ್ ಮಾಡಬೇಕು. ಜತೆಗೆ ಕೋವಿಡ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು.ಮನೆಯಿಂದ ಹೊರಬಾರದು ಎಂದು ಜಾಗೃತಿ ಮೂಡಿಸಬೇಕು.ಹಾಗಲವಾಡಿ ಮಂಚಲದೊರೆ, ಅಂಕಸಂದ್ರ ಪ್ರದೇಶಗಳಲ್ಲಿ ರೆಡ್ ಆಲರ್ಟ್ ಮಾಡಲಾಗಿದೆ. ಈ ಭಾಗದಲ್ಲಿ ಕೋವಿಡ್ ಸೆಂಟರ್ ಮಾಡಬೇಕು ಎಂದು ಈ ಭಾಗದವರು ಓತ್ತಾಯಿಸಿದ್ದಾರೆ. ನಾನು ಕೂಡ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಅವರಿಂದ ಆದೇಶ ಬಂದರೆ ತಕ್ಷಣ ಈಭಾಗದಲ್ಲಿ ಕೋವಿಡ್ ಸೆಂಟರ್ ತೆರೆಯಲಾಗುತ್ತದೆ ಎಂದು ತಿಳಿಸಿದರು.

      ಇದೇ ಸಂದರ್ಭದಲ್ಲಿ ಕಂದಾಯ ಅಧಿಕಾರಿ ನಟರಾಜು, ಪಿ.ಡಿ.ಓ.ರೇಖಾ,ಮುಖಂಡರಾದ ರಮೇಶ್,ನಾಗರಾಜು ಪಿ.ಎಸ್.ಐ. ವಿಜಯ್ ಕುಮಾರ್ ಮತ್ತೀತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap