ಸೋಂಕಿತರ ಬಗ್ಗೆ ಟಾಸ್ಕ್’ಫೋರ್ಸ್ ಸಮಿತಿಗೆ ಮಾಹಿತಿಯೇ ಇಲ್ಲ

 ಗುಬ್ಬಿ: 

      ಕೋವಿಡ್ ಪಾಸಿಟಿವ್ ಪ್ರಕರಣಗಳ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಇಲ್ಲದಿರುವ ಬಗ್ಗೆ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಪಂ ಸದಸ್ಯರು ಅಸಮಾಧಾನ ಹೊರಹಾಕಿದ ಘಟನೆ ಭಾನುವಾರ ನಡೆಯಿತು.

      ಜಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಬ್ಯಾಡಿಗೆರೆ ಗ್ರಾಮದಲ್ಲಿ ಒರ್ವ ವ್ಯಕ್ತಿ ಕೋವಿಡ್‍ನಿಂದ ಸಾವನ್ನಪ್ಪಿದ್ದು ಈ ಬಗ್ಗೆ ಸ್ಥಳೀಯ ಟಾಸ್ಕ್‍ಫೋರ್ಸ್ ಸಮಿತಿಗೆ ಮಾಹಿತಿ ಇಲ್ಲಿದಿರುವುದು ಅಚ್ಚರಿ ತಂದಿದೆ. ಕಳೆದ 13 ದಿನಗಳಿಂದ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಭಾನುವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಕೋವಿಡ್ ಪ್ರಕರಣವಾದ ಕಾರಣ ಮೃತರ ಅಂತ್ಯ ಸಂಸ್ಕಾರದ ಹೊಣೆ ವಹಿಸಿಕೊಳ್ಳುವ ಅಧಿಕಾರಿಗಳೇ ಕಾಣೆಯಾಗಿದ್ದು ಸ್ಥಳೀಯ ಪಂಚಾಯಿತಿ ಸದಸ್ಯರಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

      ಈ ಭಾಗದಲ್ಲಿ ಕೋವಿಡ್‍ನ ಮೂರು ಪ್ರಕರಣಗಳಲ್ಲಿ ಸಾವು ಸಂಭವಿಸಿದ್ದು, ಈ ಪೈಕಿ ಎರಡು ಪ್ರಕರಣಗಳಿಗೆ ಯಾವ ಅಧಿಕಾರಿಗಳು ಬಾರದಿರುವುದು. ಜೊತೆಗೆ ಸಂಸ್ಕಾರ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವಲ್ಲಿ ಸಹ ಅಧಿಕಾರಿಗಳು ಸೋತಿದ್ದಾರೆ. ಸ್ಥಳೀಯ ಪಿಡಿಓ ಮೊಬೈಲ್ ಸ್ವಿಚ್‍ಆಫ್ ಆಗಿದ್ದು, ಇನ್ಯಾವುದೇ ಇಲಾಖೆಯ ಸಿಬ್ಬಂದಿ ಈ ಪ್ರಕರಣದಲ್ಲಿ ಕಾಣಿಸಿಕೊಳ್ಳಲಿಲ್ಲ. ಅಂತ್ಯ ಸಂಸ್ಕಾರಕ್ಕೆ ಪರದಾಡುತ್ತಿದ್ದ ಮೃತರ ಕುಟುಂಬಕ್ಕೆ ಯಾವ ಸಹಕಾರ ನೀಡದ ಟಾಸ್ಕ್‍ಫೋರ್ಸ್ ಸಮಿತಿ, ಕನಿಷ್ಠ ಪಕ್ಷ ಕೋವಿಡ್ ಪ್ರಕರಣದ ಮಾಹಿತಿಯನ್ನೇ ತಿಳಿದುಕೊಂಡಿಲ್ಲ. ಶವ ಸಾಗಿಸಲು ಖಾಸಗಿ ಆಂಬ್ಯೂಲೆನ್ಸ್ ವಾಹನಗಳು ಮನಬಂದಂತೆ ಹಣ ಪೀಕುವ ಕಾರ್ಯಕ್ಕೆ ಮುಂದಾಗಿವೆ.

      ಕೋವಿಡ್ ಪ್ರಕರಣಗಳ ಅಂಕಿಅಂಶ ತಿಳಿದುಕೊಳ್ಳಬೇಕಾದ ಪಿಡಿಓ ಅಧಿಕಾರಿಗಳಿಗೆ ಬ್ಯಾಡಿಗೆರೆ ಗ್ರಾಮದ ಸಾವಿನ ಪ್ರಕರಣದ ಬಗ್ಗೆ ತಿಳಿದಿಲ್ಲ ಎಂಬುದು ಅವರ ನಿರ್ಲಕ್ಷ್ಯತೆ ತೋರುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ರೋಗಿಯ ಬಗ್ಗೆ ಮಾಹಿತಿ ರವಾನೆ ಆಗಿಲ್ಲವೆಂದರೆ ಇಲ್ಲಿ ಯಾರ ತಪ್ಪಿದೆ ಎಂಬುದು ತಿಳಿಯುತ್ತಿಲ್ಲ. 13 ದಿನಕ್ಕೆ ಮೃತಪಟ್ಟ ವ್ಯಕ್ತಿಯ ಶವ ಗ್ರಾಮಕ್ಕೆ ತಂದಾಗ ಯಾವೊಬ್ಬ ಅಧಿಕಾರಿಗಳು ಸಹಕಾರ ನೀಡದ ಕಾರಣ ಮೊಬೈಲ್ ಮೂಲಕ ಕಾರಣ ಕೇಳಿದಾಗ ಈ ಪ್ರಕರಣದ ಮಾಹಿತಿಯೇ ತಿಳಿದಿಲ್ಲ ಎನ್ನುವ ಉತ್ತರ ಯಾರ ಅಸಡ್ಡೆ ಎಂಬುದು ತಿಳಿಯಬೇಕಿದೆ ಎಂದ ಗ್ರಾಪಂ ಉಪಾಧ್ಯಕ್ಷ ನಾಗರಾಜ್ ಅರಸ್, ಕೋವಿಡ್ ವೈರಸ್ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಬೇಕಾದ ಟಾಸ್ಕ್‍ಫೋರ್ಸ್ ಸಮಿತಿ ಎಷ್ಟು ಪ್ರಕರಣಗಳಿವೆ ತಿಳಿದುಕೊಳ್ಳಬೇಕಿದೆ. ಸಾವನ್ನಪ್ಪಿದ ವ್ಯಕ್ತಿಯ ಕುಟುಂಬವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆಯೇ ತಿಳಿದಿಲ್ಲ. ಅವರ ಟ್ರಾವಲ್ ಹಿಸ್ಟರಿ ತಿಳಿಯುವದರಿಲಿ ಪಾಸಿಟೀವ್ ಪ್ರಕರಣದ ಮಾಹಿತಿಯೇ ತಿಳಿದಿಲ್ಲ ಎನ್ನುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತಾಲ್ಲೂಕು ಆಡಳಿತ ಕ್ರಮವಹಿಸಿ, ಹಣ ಪೀಕುವ ಆಂಬ್ಯುಲೆನ್ಸ್ ವಾಹನದ ವಿರುದ್ದ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು.

     ” ಗುಬ್ಬಿಯಿಂದ ಕೇವಲ 8 ಕಿ.ಮೀ ದೂರದ ಗ್ರಾಮಕ್ಕೆ ಶವ ಸಾಗಿಸಲು ಖಾಸಗಿ ಆಂಬ್ಯೂಲೆನ್ಸ್‍ನವರು 20 ಸಾವಿರ ರೂ.ಗೆ ಬೇಡಿಕೆ ಇಟ್ಟು ನಂತರ 12 ಸಾವಿರ ರೂ.ವಸೂಲಿ ಮಾಡಿದ್ದಾರೆ. ಖಾಸಗಿ ಆಂಬ್ಯೂಲೆನ್ಸ್‍ನವರು ಈ ಮಟ್ಟಕ್ಕೆ ಇಳಿದಿದ್ದು ಅತ್ಯಂತ ಹೇಯಕರ. ಈ ಬಗ್ಗೆ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು. “

-ಜೆ.ಎಂ.ನರಸಿಂಹಮೂರ್ತಿ, ಗ್ರಾ.ಪಂ ಸದಸ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link