ಮಳೆಗೆ ಕೆಸರು ಗದ್ದೆಯಾದ ರಸ್ತೆ : ಜನ ಪ್ರತಿನಿಧಿಗಳ ಅಸಡ್ಡೆ!!

ಗುಬ್ಬಿ :

      ತಾಲ್ಲೂಕಿನ ಜಿ.ಹೊಸಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಜವರೇಗೌಡನಪಾಳ್ಯದಲ್ಲಿರುವ ರಸ್ತೆಯು ಮಳೆ ಬಂದರೆ ಸಾಕು ಕೆಸರು ಗದ್ದೆಯಾಗಿ ಪರಿವರ್ತನೆಯಾಗಿ ಜನ ಜಾನುವಾರುಗಳು ಓಡಾಡಲು ಯೋಗ್ಯವಿಲ್ಲದಂತಾಗುತ್ತದೆ.

      ಈ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ದೂರು ಕೊಟ್ಟರೂ, ಎಷ್ಟೇ ಮನವಿ ಸಲ್ಲಿಸಿದರೂ ಯಾವೊಬ್ಬ ಅಧಿಕಾರಿಗಳು ಈ ಕಡೆ ತಲೆಹಾಕಿಲ್ಲ ಎಂದು ಊರಿನ ಜನ ಆರೋಪಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯವರು ಈ ರಸ್ತೆಯನ್ನು ನರೇಗಾ ಅಡಿಯಲ್ಲಿ ಸೇರಿಸಿ ರಸ್ತೆ ನಿರ್ಮಾಣ ಮಾಡಿಸಬಹುದಿತ್ತು. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದರ ಕಡೆ ಗಮನ ಹರಿಸಿಲ್ಲವೆಂದು ಸ್ಥಳೀಯ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ ಆಪಾದಿಸಿದ್ದಾರೆ.

      ರಸ್ತೆಯು ಸುಮಾರು ಇಪ್ಪತ್ತು ವರ್ಷಗಳಿಂದಲೂ ದುಸ್ಥಿತಿಯಲ್ಲಿದೆ. ಆದರೂ ನಮ್ಮ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಸ್ಥಳೀಯ ಶಾಸಕರನ್ನು ಕೇಳಿದರೆ ಸರ್ಕಾರ ನನಗೆ ಕೊಟ್ಟ ಅನುದಾನ ವಾಪಸ್ ತೆಗೆದುಕೊಂಡಿದೆ, ಇಲ್ಲದಿದ್ದಲ್ಲಿ ನಾನು ಈ ರಸ್ತೆಗೆ ಹಣ ಹಾಕುತ್ತಿದ್ದೆ ಎನ್ನುತ್ತಾರೆ. ಊರಿನ ಒಳಗಡೆ ಸು.900-100 ಮೀಟರ್ ಇರುವ ಈ ಕೆಸರುಗದ್ದೆ ರಸ್ತೆಗೆ ಮುಕ್ತಿ ನೀಡಬೇಕು, ಇಲ್ಲವಾದರೇ ಮುಂದಿನ ಚುನಾವಣೆಗಳಲ್ಲಿ ಜನಪ್ರತಿನಿಧಿಗಳು ಊರಿಗೆ ಬಂದಾಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link