ಎಂ.ಎನ್.ಕೋಟೆ:
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಎಂ ಎನ್ ಕೋಟೆಗೆ ಮಂಗಳೂರಿನಿಂದ ಬಂದಿದ್ದ ಮೂವರು ವ್ಯಕ್ತಿಗಳನ್ನು ಹೋಮ್ ಕ್ವಾರಂಟೈನ್‍ನಲ್ಲಿ ಇಡಬೇಕು ಎಂದು ಪಿಡಿಓ ಸಿ.ನಾಗೇಂದ್ರ ತಿಳಿಸಿದ್ದಾರೆ.
ರವಿಚಂದ್ರ, ಲಿಖಿತ್, ದಿವಾಕರ್ ಎಂಬ ಈ ಮೂವರು ವ್ಯಕ್ತಿಗಳು ಮಂಗಳೂರಿನಿಂದ ಎಂ ಎನ್ ಕೋಟೆಗೆ ಶುಕ್ರವಾರ ದೇವಸ್ಥಾನದ ಕೆಲಸಕ್ಕೆ ಬಂದಿದ್ದಾರೆ.
ಈ ಮೂರು ಜನರ ಮೇಲೆ ಆರೋಗ್ಯಾಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ಲಾಕ್ ಡೌನ್ ಆದ ಸಂದರ್ಭದಲ್ಲಿ ಇವರು ತಮ್ಮ ಊರುಗಳಿಗೆ ತೆರಳಿದ್ದರು. ಈಗ ಮತ್ತೆ ಕೆಲಸಕ್ಕೆ ಬಂದಿದ್ದು ಇವರನ್ನು 15 ದಿನಗಳ ಕಾಲ ಮನೆಯಲ್ಲಿ ಇರಬೇಕು. ಮನೆಯಿಂದ ಹೊರಗಡೆ ಬರಬಾರದು ಎಂದು ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಡಾ.ಸವಿತ ಭೇಟಿ ನೀಡಿ, ಮೂವರು ವ್ಯಕ್ತಿಗಳನ್ನು ಪರಿಶೀಲನೆ ಮಾಡಿ ಕರೋನಾ ಟೆಸ್ಟ್ ಗೆ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ. ನೀವು ಹೊರಗಡೆ ಹೋಗಬಾರದು ಮನೆಯಲ್ಲಿ ಇರಬೇಕು ಎಂದು ಮೂವರು ವ್ಯಕ್ತಿಗಳಿಗೆ ತಿಳಿಸಿದ್ದಾರೆ.
ಆಸ್ಪತ್ರೆ ಅಧಿಕಾರಿ ರಮೇಶ್ ಎಎಸ್ ಐ ಶಂಕರೇಶ್, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
