ನವದೆಹಲಿ:
2023-24ರ ಹಣಕಾಸು ವರ್ಷದಲ್ಲಿ ಭಾರತವು ಚೀನಾ ಮತ್ತು ಅಮೆರಿಕದಂತಹ ಪ್ರಮುಖ ಮತ್ತು ದೈತ್ಯ ಆರ್ಥಿಕತೆಗಳನ್ನು ಮೀರಿಸುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯಲ್ಲಿ ಭವಿಷ್ಯ ನುಡಿದಿದೆ. ಐಎಂಎಫ್ ವರ್ಲ್ಡ್ ಎಕನಾಮಿಕ್ ಔಟ್ ಲುಕ್ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಅಥವಾ ಭಾರತದ ಜಿಡಿಪಿ ಶೇ.5.9ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು 5.9% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. IMF ನ ದ್ವೈವಾರ್ಷಿಕ ವರದಿಯ ಪ್ರಕಾರ, ಭಾರತದ ಮುಖ್ಯ ಚಿಲ್ಲರೆ ಹಣದುಬ್ಬರವು ಹಿಂದಿನ ವರ್ಷದಲ್ಲಿ 6.7% ರಿಂದ 2023-24 ರಲ್ಲಿ 4.9% ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಆರ್ಥಿಕತೆಯಲ್ಲಿ ಭಾರತದ ಶಕ್ತಿ ಮತ್ತು ಯಾವುದೇ ಸವಾಲನ್ನು ಜಯಿಸುವ ನಿರಂತರ ಇಚ್ಛೆಗೆ ಇದು ಒಂದು ಜ್ವಲಂತ ಉದಾಹರಣೆಯಾಗಿದೆ.
2023 ರಲ್ಲಿ, ಅಮೇರಿಕ ಆರ್ಥಿಕತೆಯು 1.6 ಪ್ರತಿಶತದಷ್ಟು ವಿಸ್ತರಿಸುತ್ತದೆ ಎಂದು ಅಂದಾಜಿಸಲಾಗಿದೆ, ಇದು IMF ನ ಹಿಂದಿನ ಭವಿಷ್ಯಕ್ಕಿಂತ 0.2 ಶೇಕಡಾ ಪಾಯಿಂಟ್‌ಗಳು ಹೆಚ್ಚು. ಮುಂದಿನ ವರ್ಷ, ಅಮೆರಿಕ GDP ಈ ಜನವರಿಯಿಂದ 0.1 ಶೇಕಡಾವಾರು ಕುಸಿತದೊದಿಗೆ 1.1ರಷ್ಟಕ್ಕೆ ಕುಸಿಯುತ್ತದೆ ಎಂದು ಮುನ್ಸೂಚನೆ ನೀಡಿದೆ. ಅಂತೆಯೇ ಐಎಂಎಫ್ ಈ ವರ್ಷ ಚೀನಾಕ್ಕೆ ತನ್ನ GDP ಮುನ್ಸೂಚನೆಯನ್ನು 5.2% ನಲ್ಲಿ ಇರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
