#Metoo: ಆರೋಪಿಸುತ್ತಿರುವ ನಟಿಯರು ವಿಷಕನ್ಯೆಯರು..!

 ಬೆಂಗಳೂರು:

      #Metoo ವಿರುದ್ಧ ಧ್ವನಿಯೆತ್ತಿರುವ ಸ್ಯಾಂಡಲ್ ವುಡ್ ನಟಿಯರು  ಸ್ಯಾಂಡಲ್​ವುಡ್​ನಲ್ಲಿ ನಟ, ನಿರ್ದೇಶಕರ ವಿರುದ್ಧ ಆರೋಪ ಮಾಡುವ ಮೂಲಕ ತಾವು ಪತಿವ್ರತೆಯರು ಎಂದು ಸಾಬೀತು ಮಾಡಲು ಹೊರಟಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅವರು ಗುಡುಗಿದ್ದಾರೆ. 

ನಟ ಅರ್ಜುನ್‍ಸರ್ಜಾರನ್ನು ಬಿಡದ ‘ಮೀ ಟೂ’ ಬಿಸಿ

     ‘ಅವಕಾಶಕ್ಕಾಗಿ ಮದುವೆಯ ವಿಷಯವನ್ನು ಮುಚ್ಚಿಟ್ಟು, ಈಗ ಹೊರಗೆ ಹಾಕುತ್ತಿರುವುದರ ಉದ್ದೇಶ ಏನು? ಇವರು ತಮ್ಮ ಪತಿ, ಅತ್ತೆ, ಮಾವ ಅವರ ಎದುರಿಗೆ ತಮ್ಮ ಪಾತಿವ್ರತ್ಯ ಸಾಬೀತುಮಾಡಲು ಹೊರಟಿದ್ದಾರೆಯೇ?’ ಎಂದು ಪರೋಕ್ಷವಾಗಿ ಸಂಗೀತಾ ಭಟ್ ಮತ್ತು ಶ್ರುತಿ ಹರಿಹರನ್ ವಿರುದ್ಧ ನಿರ್ದೇಶಕ ಗುರುಪ್ರಸಾದ್ ಹರಿಹಾಯ್ದರು. ಜತೆಗೆ, ನಟಿಯರನ್ನು ವಿಷಕನ್ಯೆಯರು ಎಂದು ಜರಿದರು.

ಸ್ಯಾಂಡಲ್ ವುಡ್ ಗೂ ಕಾಲಿಟ್ಟ “#MeToo”

      ಅಂದು ಸುಮ್ಮನಿದ್ದು, ಇಂದು ರೊಚ್ಚಿಗೆದ್ದಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಅವರು, ನಾನು ಬಾಯಿಬಿಟ್ಟರೆ, ಏನೇನೋ ಆಗುತ್ತೆ. ನಾವು ಗಂಡಸರು ಮಾತನಾಡಲು ಶುರುಮಾಡಿದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಆತಂಕದಿಂದ ಸುಮ್ಮನಿರುತ್ತೇವೆ’ ಎಂದು ಕಿಡಿಕಾರಿದ ಅವರು, ಇವರಿಗಿಂತ ಸನ್ನಿ ಲಿಯೋನ ನಿಜವಾದ ಪತಿವ್ರತೆ ಎಂದು ಹೇಳಿದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap