ಬಿಟ್‌ಕಾಯಿನ್ ಹಗರಣ : ಹ್ಯಾಕರ್‌ ಬಂಧನ

ಬೆಂಗಳೂರು

    ಬಿಟ್‌ಕಾಯಿನ್ ಹಗರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ನನ್ನು ಬಂಧಿಸಲಾಗಿದೆ.

    ಕಳೆದ ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಇಂಟರ್ ನ್ಯಾಷನಲ್ ಹ್ಯಾಕರ್​ನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಕಿಗೂ ಮುನ್ನವೇ ಹ್ಯಾಕಿಂಗ್ ನಲ್ಲಿ ಕೈಚಳಕ ತೋರಿ ಭೂಗತವಾಗಿದ್ದ ಪಂಜಾಬ್ ಮೂಲದ ನಟೋರಿಯಸ್ ಹ್ಯಾಕರ್ ರಾಜೇಂದ್ರಸಿಂಗ್ ನನ್ನು ಎಸ್​ಐಟಿ ಬಂಧಿಸಿದ್ದು, ಈ ಪ್ರಕರಣದಲ್ಲಿ ಮತ್ತಷ್ಟು ಸತ್ಯ ಹೊರಬರುವ ಸಾಧ್ಯತೆಗಳಿವೆ.

   ಈ ಹ್ಯಾಕರ್ ರಾಜೇಂದ್ರಸಿಂಗ್ ಸರ್ಕಾರಿ ಹಾಗೂ ಖಾಸಗಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಈ ಹ್ಯಾಕರ್​ಗಾಗಿ ಹುಡುಕಾಟ ಮಾಡುತ್ತಿದ್ದವು. ಇದೀಗ ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ತಂಡ ಬಂಧಿಸಿದ್ದು, ಸದ್ಯ ಮುಂದಿನ ತನಿಖಾ ದೃಷ್ಟಿಯಿಂದ ಎಸ್​ಐಟಿ, ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap