ಹಗರಿಬೊಮ್ಮನಹಳ್ಳಿ:
ಈ ಮಹಿಳೆಗೆ ಹೆಸರು ಮಾಡುವ ಹಪಾಹಪಿ ಇಲ್ಲ, ದುಡ್ಡು ಮಾಡುವ ದಾವಂತವಂತು ಮೊದಲೇ ಇಲ್ಲ. ಹಾಗಂತ ಸಿರಿವಂತ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಲ್ಲ. ಹೀಗಿದ್ದರೂ ತನ್ನ ಹೊಲಿಗೆ ತರಬೇತಿಯನ್ನು ಕಾಯಕ ಮಾಡಿಕೊಂಡು ಹಳ್ಳಿಯ ಸಾವಿರಾರು ಹೆಣ್ಣು ಮಕ್ಕಳಿಗೆ ಬದುಕಿನ ದಾರಿಯನ್ನು ರೂಪಿಸಿದ ಅಫೀಜಾ ಬೀ ಸಮಾಜದ ಕಣ್ಣಿಗೆ ಎಲೆಮರೆಯ ಕಾಯಿಯಾಗಿಯೇ ಜೀವನ ನಡೆಸುತಿದ್ದಾರೆ.
ಈ ಮಹಿಳೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಮೂಲದವರು.
ತನ್ನ 13ನೇ ವಯಸ್ಸಿಗೆ 6ಜನ ಸಹೋದರಿಯರು ಮತ್ತು 2ಸಹೋದರರನನು ಬಿಟ್ಟು ತಂದೆ ಸಾವನ್ನಪ್ಪಿದ್ದು ಕುಂಟುಂಬ ಸಂಕಷ್ಟದ ದಿನಗಳನ್ನು ಕಂಡಿತು. ಎದೆಗುಂದದ ಅಫೀಜಾ ಅಂದವಾದ ಬದುಕುಕಟ್ಟಿಕೊಂಡು ತನ್ನವರನ್ನು ಸಾಕಿ ಸಲುಹಿ ನಂತರ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ದಾರಿದೀಪವಾದಳು. ಸಮಾಜ ಇವರನ್ನು ಗುರುತಿಸುವಂತ ಕೆಲಸಮಾಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








