ಪ್ರಜಾಪ್ರಗತಿ ಸಂಪಾದಕರಿಗೆ “ಮೊಹರೆ ಹಣಮಂತರಾಯ” ಪ್ರಶಸ್ತಿಯ ಗರಿ

ಬೆಂಗಳೂರು:    

  ಪ್ರಜಾ ಪ್ರಗತಿ ಸಂಪಾದಕರಾದ ಶ್ರೀ ಎಸ್. ನಾಗಣ್ಣರವರಿಗೆ ಮಾಧ್ಯಮ ಸೇವೆ ಗುರುತಿಸಿ 2017 ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಲ್ಪಡುವ “ಮೊಹರೆ ಹಣಮಂತರಾಯ” ಪ್ರಶಸ್ತಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್ ಬೊಮ್ಮಾಯಿಯವರು ಪ್ರದಾನ ಮಾಡಿದರು. 

       ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಸಂಜೆ ನಡೆದ ವಾರ್ತಾ ಇಲಾಖೆ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಜಾಪ್ರಗತಿ ಸಂಪಾದಕರಾದ ಎಸ್. ನಾಗಣ್ಣ ಅವರಿಗೆ 2017ನೇ ಸಾಲಿನ ಮೊಹರೆ ಹಣಮಂತರಾಯ ಪ್ರಶಸ್ತಿ ಪ್ರದಾನ ಮಾಡಿದರು. ಸಚಿವ ಅಶೋಕ್, ಮುಖ್ಯ ಮಂತ್ರಿ ಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ವಾರ್ತಾ ಇಲಾಖೆ ಆಯುಕ್ತ ರಾದ ಡಾ. ಪಿ. ಎಸ್. ಹರ್ಷ, ಹಿರಿಯ ಪತ್ರಿಕೋದ್ಯಮಿ ವಿಜಯಸಂಕೇಶ್ವರ, ಪಬ್ಲಿಕ್ ಟಿವಿ ಮುಖ್ಯ ಸ್ಥ ಎಚ್. ಆರ್. ರಂಗನಾಥ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಇತರರಿದ್ದರು.

     ಇಲ್ಲಿಯವರೆಗೂ ಸಂಪಾದಕರಗೆ ಹಾಗೂ ಪ್ರಜಾ ಪ್ರಗತಿ ಪತ್ರಿಕೆಗೆ 2004 ರಲ್ಲಿ ಆಂದೋಲನ ವಿಶೇಷ ಪ್ರಶಸ್ತಿ, 2005 ರಲ್ಲಿ ಖಾದ್ರಿ ಶಾಮಣ್ಣ ಪ್ರಶಸ್ತಿ, 2015 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಾಟೀಲ ಪುಟ್ಟಪ್ಪ ಪ್ರಶಸ್ತಿ, 2021 ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ.. ಇನ್ನೂ ಹತ್ತು ಹಲವಾರು ಪತ್ರಿಕೆಗೆ ಹಾಗೂ ಸಮಾಜ ಸೇವೆ ಗುರುತಿಸಿ ಪ್ರಶಸ್ತಿಗಳು ಅರಸಿ ಬಂದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap