ಅಕ್ಷರದಾಸೋಹ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕರಿಗೆ ಸನ್ಮಾನ ಕಾರ್ಯಕ್ರವ

ಹಾನಗಲ್ಲ:

      ಶಿಕ್ಷಕ ವೃತಿಗೆ ವಿಶೇಷವಾದ ಸ್ಥಾನವಿದೆ ಅದನ್ನು ಕಾಪಾಡಿಕೊಂಡು ಹೋಗಬೇಕು ಸರಕಾರದಿಂದ ಅನೇಕ ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದ್ದು ಅವುಗಳನ್ನು ಮಕ್ಕಳಿಗೆ ತಲುಪಿಸು ಕಾರ್ಯ ಆಗಬೇಕು ಎಂದು ತಾಲೂಕಿನಲ್ಲಿ ಅಕ್ಷರ ದಾಸೋಹ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿರ್ಗಮಿಸಿದ ಎಂ.ಎನ್ ಅಡಿವೆಪ್ಪನವರ್ ಹೇಳಿದರು ತಾಲೂಕಿನ ಉಪ್ಪುಣಸಿ ಕ್ಲಸ್ಟರ್ ವತಿಯಿಂದ ಅಣಿಕ್ರಾಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

      ಅಕ್ಷರ ದಾಸೋಹವೆಂದರೆ ಒಳ್ಳೆಯ ಮನಸ್ಸಿನಿಂದ ಮಾಡಿಕೊಂಡು ಹೋಗುವಂಹ ಯೋಜನೆ ಈ ಒಂದು ಹುದ್ದೆಗೆ ಬರುವಂತವರು ಸಹ ಒಳ್ಳೆಯ ಮನಸ್ಸಿನವರಾಗಿರಬೇಕು ಎಲ್ಲಾ ಮಕ್ಕಳನ್ನು ಶಿಕ್ಷಕರನ್ನು ಪ್ರೀತಿಯಿಂದ ಕಾಣಬೇಕು ಆಗಾ ಮಾತ್ರ ಈ ಹುದ್ದೆಗೆ ಒಂದು ಗೌರವ ಸಿಗುತ್ತದೆ. ಸಿ.ಆರ್.ಪಿ, ಮುಖ್ಯಶಿಕ್ಷಕರು, ಶಿಕ್ಷಕರು, ಶಾಲಾ ಮಕ್ಕಳು ಊರಿನವರನ್ನು ಸಹ ಪ್ರೀತಿಯಿಂದ ಕಂಡಾಗ ಮಾತ್ರ ಈ ಹುದ್ದೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

       ಸಂಪನ್ಮೂಲ ವ್ಯಕ್ತಿ ಎನ್ ಡಿ ಮಾರುತಿ ಮಾತನಾಡಿ ಕಳೆದ ನಾಲ್ಕೈದು ವರ್ಷದಲ್ಲಿ ಯಾವುದೇ ರೀತಿಯಾದ ಶಾಲೆಗಳಿಗೆ ಮಕ್ಕಳ ಬಿಸಿಯೂಟಕ್ಕೆ ಅದರಲ್ಲೂ ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ಶಿಕ್ಷಕರಿಗೆ ಸಲ್ಲಿಸುವ ಇವರ ಸೇವೆ ಅಮೋಘವಾದದ್ದು ಎಂದು ಅವರ ಗುಣಗಳನ್ನು ಸ್ಮರಿಸಿದರು ವ್ಯಕ್ತಿಯ ಗುಣ ಅವರನ್ನು ಕಳೆದುಕೊಂಡಾಗ ಗೋತ್ತಾಗುತ್ತದೆ ಎಂದು ಮಾರ್ಮಿಕವಾಗಿ ಸನ್ನಾನಿತರನ್ನು ಗುಣಗಾನ ಮಾಡಿದರು

       ಈ ಸಂದರ್ಭದಲ್ಲಿ ಅಕ್ಷರದಾಸೋಹ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಎಂ.ಎನ್ ಅಡಿವೆಪ್ಪನವರ್, ಶಿಕ್ಷಣ ಸಂಯೋಜಕರಾಗಿ ಸೇವೆ ಸಲ್ಲಿಸಿದ ಡಿ ನಾಗರಾಜ್, ಆರ್ ಕೆ ಕರಗುದರಿ ಇವರುಗಳನ್ನು ಸನ್ಮಾನಿಸಿದರು.

        ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಎನ್.ಡಿ.ಮಾರುತಿ ಎಂ.ಎನ್ ಅಡಿವೆಪ್ಪನವರ್, ಡಿ.ನಾಗರಾಜ, ಆರ್,ಕೆ.ಕರಗುದರಿ ಶಿಕ್ಷಕರುಗಳಾ ಜೆ.ವಿ.ಬಣಕಾರ, ಡಿ.ಆರ್.ಲವಕುಮಾರ್, ರವಿಕುಮಾರ್ ನಡುವಿನಹಳ್ಳಿ, ಚೇತನ್ ಬಣಕಾರ್, ಜಿ.ಎ.ಹರಕಿನಮನಿ, ಪಿ.ವೈ ಗುತ್ತಲ, ಕವಿತಾ ಕಂಚಗಾರಗಟ್ಟಿ, ಎಸ್.ಎನ್ ಶಿವಣ್ಣನವರ್ ,ಎ.ವೈ ಮುಗಳಿಕಟ್ಟಿ, ಬಿ.ಜಿ ಉಜ್ಜಪ್ಪ, ಎನ್.ಎಂ.ಸುತಾರ್, ಪಿ.ಬಿ.ಚಿಕ್ಕಣಜಿ, ಎಂ.ಎಂ.ಚೌಡಪ್ಪನವರ್, ಡಿ.ಎ.ಮುನ್ನಳ್ಳಿ ಇನ್ನು ಮುಂತಾದವರು. ಭಾಗವಹಿಸಿದ್ದರು

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link