ಹಾವೇರಿ :
ಶ್ರೀ ಕನಕಗುರುಪೀಠ ಮೈಲಾರ ಶಾಖಾಮಠದಲ್ಲಿ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಯವರು ನಿರ್ಮಿಸುತ್ತಿರುವ ವಸತಿ ಶಾಲೆ ಕಟ್ಟಡಕ್ಕೆ 1,16,500 (ಒಂದು ಲಕ್ಷದ ಹದಿನಾರು ಸಾವಿರದ ಐದು ನೂರು) ಇಟ್ಟಿಗೆಗಳನ್ನು ಸಮಾಜದ ಬಂಧುಗಳು ಹಾಗೂ ಶ್ರೀಮಠದ ಭಕ್ತರು ಪೂರೈಸಿದ್ದಾರೆ.
ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕು ಕವಲೆತ್ತು ಗ್ರಾಮದ ಸಮಾಜದ ಬಂಧುಗಳು ಹಾಗೂ ಶ್ರೀಮಠದ ಭಕ್ತರು ದುರ್ಗಾದೇವಿ ಪೂಜೆ ಸಲ್ಲಿಸಿ ನಂತರ ಇಟ್ಟಿಗೆಗಳನ್ನು ಲೋಡ್ ಮಾಡಿ ಮೈಲಾರ ಶಾಖಾಮಠಕ್ಕೆ ಕಳುಹಿಸಿ ಕೊಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ