ಮಕ್ಕಳ ಕವಿ ಗೋಷ್ಠಿ

ಹಾವೇರಿ :

     ತಾವು ನೋಡಿದ ಸರಳ ಸಹಜ ವಿಷಯಗಳ ಕುರಿತು ಕವಿತೆಗಳ ರಚಿಸಿ ಓದಿದ ಅಪರೂಪದ ಮಕ್ಕಳ ಕವಿ ಗೋಷ್ಠಿ ನಗರದ ಗೆಳೆಯರ ಬಳಗದ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

      ಗೆಳೆಯರ ಬಳಗ, ಜ್ಞಾನ ಗಂಗಾ ಶಿಕ್ಷಣ ಸಮಿತಿ ಹಾಗೂ ಭಾರತೀಯ ಸೃಜನಶೀಲ ಸಾಹಿತ್ಯ ಬಳಗವು ಜಂಟಿಯಾಗಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ 35 ಬಾಲ ಕವಿಗಳು ಭಾಗವಹಿಸಿದ್ದರು.

     ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಸಮಿತಿಯ ಕಾರ್ಯದರ್ಶಿ ಸಂಜೀವ ಬಂಕಾಪೂರ ಗೋಕಾಕ್ ಬಣಕಾರ ಚಂಪಾರವರಂತಹ ಆಧುನಿಕ ಕವಿಗಳನ್ನು ಕೊಟ್ಟ ಹಾವೇರಿ ನೆಲದಲ್ಲಿ, ಹೊಸ ಪ್ರತಿಭೆಗಳು ಬರಲು ಇಂತಹ ಕವಿಗೋಷ್ಠಿ ಪ್ರೇರಣೆ ನೀಡಲಿ ಎಂದರು.

     ಭಾರತೀಯ ಸೃಜನಶೀಲ ಸಾಹಿತ್ಯ ಬಳಗದ ಜಿಲ್ಲಾ ಅಧ್ಯಕ್ರಷ ಸಂತೋಷ ಬಿದರಗಡ್ಡಿ ಅತಿಥಿಯಾಗಿ  ಕಾವ್ಯವು ಮಕ್ಕಳ ಮನಸ್ಸು ಮತ್ತು ವ್ಯಕ್ತಿತ್ವವನ್ನು ಬದಲಿಸುತ್ತದೆ. ಸಮಾಜ ಮ್ತು ಜೀವನದ ಬಗ್ಗೆ ಸದ್ಭಾವನೆಗಳನ್ನು ಹುಟ್ಟು ಹಾಕುತ್ತದೆ’ ಎಂದರು.
ತುಂಬ ರೋಚಕ ಅನುಭವ ನೀಡಿದ ಈ ಕವಿಗೋಷ್ಠಿಯಲ್ಲಿ ನಾನಾ ವಿಷಯಗಳ ಕುರಿತು ಪ್ರತಿ ಕವಿಯೂ ವಿಭನ್ನವಾದ ಕವಿತೆ ಓದಿದರು. ನಾನೇ ಹಿರೋ, ನನ್ನ ಸೈಕಲ್ಲು , ನನ್ನ ಪೆನ್ನು , ಗೊಂಬೆ, ಮಾಮರ, ಗಾಳಿಪಟ, ನನ್ನ ಶಾಲೆ, ನೀರು, ಸೋರ್ಯ , ಆಕಾಶ, ನನ್ನ ಗೊಂಬೆ ಹೀಗೆ ಸಹಜ ವಸ್ತುಗಳನ್ನು ಆಯ್ದಯಕೊಂಡು ಓದಿದ ಕವಿತೆಗಳು ಚಪ್ಪಾಳೆಯನ್ನು ಗಿಟ್ಟಿಸಿಕೊಂಡವು. 8ನೇ ತರಗತಿಯಲ್ಲಿ ಓದುತ್ತಿರುವ ಪ್ರತೀಕ ಪಡಿಗೋದಿ  ಹೇಳೋರಿಲ್ಲ, ಕೇಳೋರಿಲ್ಲ ಎಂಬ ಕವಿತೆ ಸಭಗೆ ಕಚಗುಳಿಯನ್ನಿಟ್ಟಿತು.

     ಬಾಲ ಕವಿಗಳಾದ ಜಿ ಬಿ ಕಾಶಿಕ್, ಲೋಕೇಶ ಯರೇಶೀಮಿ, ವರದ ಬಂಡವಲ್ಕರ್, ಶ್ಯಾಮಕಲ್ಯಾಣ ಬೆನ್ನೂರ, ಕಿಶನ ಹೆಬ್ಬಾರ, ಸಹನಾ ಬಂಡವಲ್ಕರ್, ಲಕ್ಷ್ಮೀ ಬಾವಿಮಠ, ಸ್ಪೂರ್ತಿ ಸಣ್ಣಪ್ಪನವರ, ಲಕ್ಷ್ಮೀ ಕುರಡೇಕರ್, ಶಿಲ್ಪಾ ಕರ್ಜಗಿ, ಸ್ನೇಹಾ ಪಾಟೀಲ, ಅಪೇಕ್ಷಾ ಪಟ್ಟಣಶೆಟ್ಟಿ, ವಿದ್ಯಾ ಕುಮಟಗಿ, ಕುಶಾಲಾ ಹೊಮಬರಡಿ, ಸಂಜನಾ ಬಂಡವಲ್ಕರ್ , ಜಯಲಕ್ಷ್ಮೀ ಶಿಡೇನೂರ, ರಶ್ಮೀ ನಂದಿ, ಅಮೃತೇಶ ಕೋಡಶೆಟ್ಟರ, ಚೇತನ ಶಿವಪೂರ, ಸುಮನ್ ಕಮಲಾಪೂರ, ಉಮ್ಮಿಹಾನಿ ನರಗಡಕನವರ, ಭವನೇಶ್ವರಿ ಸೂರಣಗಿ, ಮಂಜುನಾಥ ಕೂರಗುಂದ, ಕೋಮಲ್ ನರಗುಂದ, ಸಿಂಚನಾ ವ್ಹಿ ಎಲ್, ಅಂಜು ಪತ್ತಾರ. ಸಿಂಚನಾ ನಾಗಾಲಾಪೂರ, ಪ್ರಶಾಂತರ ಮುಳಗುಂದ, ನಿಹಾ ಓಂಕಾರಣ್ಣನವರ, ಗೌತಮ ಮಾಳದಕರ ಮುಂತದವರು ಕವಿತೆಗಳನ್ನು ಓದಿದರು.

      ವೇದಿಕೆಯಲ್ಲಿ ಶಿಕ್ಷಣ ಸಮಿತಿಯ ಚೇರಮನ್ ಜೆಆರ್ ಗುಡಿ ಕಾರ್ಯದರ್ಶಿ ಕೃಷ್ಣಾ ಮಂಗಳೂರು, ಮುಖ್ಯೋಪಾಧ್ಯಾರಾದ ಎಸ್‍ಟಿ ಮಾಹಾಂತಿಮಠ, ಕಲಾ ಬಳಗದ ಮಾಲತೇಶ ಕರ್ಜಗಿ, ವೀರನಗೌಡ ಪಾಟೀಲ ಹಾಗೂ ಹಿರಿಯ ಕವಿ ಸತೀಶ ಕುಲಕರ್ಣಿಯವರು ಇದ್ದರು.
ಶಿಕ್ಷಕಿ ನೇತ್ರಾವತಿ ಹಿರೇಮಠ ಸ್ವಾಗತಿಸಿದರು. ಕವಿಗೋಷ್ಠಿಯನ್ನು ಸಂಯೋಜಿಸಿದ್ದ ಶಿಕ್ಷಕಿ ಕವಯತ್ರಿ ಶ್ರಿಮತಿ ರೇಖಾ ರಂಗನಾಥ ಭೈರಕ್ಕನವರ ಕವಿಗೋಷ್ಠಿಯನ್ನು ನಡೆಸಿ ಕೊನೆಯಲ್ಲಿ ವಂದಿಸಿದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link