ಟಿಸಿ ಸೇರಿದಂತೆ ಐವರ ಮೇಲೆ ಚೂರಿ ಹಾಕಿದ್ದ ವ್ಯಕ್ತಿ ಇವನೇ ನೋಡಿ..!!

ಖಾನಾಪುರ:

     ಟಿಸಿ ಟಿಕೆಟ್ ಕೇಳಿದ್ದಕ್ಕೆ ಒಬ್ಬ ಟಿಸಿ ಸೇರಿ ನಾಲ್ವರ ಮೇಲೆ ಮುಸುಕುದಾರಿಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದು ಹಲ್ಲೆ ನಡೆಸಿದ ಆರೋಪಿ ಪರಾರಿಯಾಗಿದ್ದ.

     ಪುದುಚೇರಿ-ದಾದರ್ (ಚಾಲುಕ್ಯ ಎಕ್ಸ್‌ಪ್ರೆಸ್)ರೈಲು ಲೋಂಡ ರೈಲು ನಿಲ್ದಾಣ ಮತ್ತು ಖಾನಾಪುರ ರೈಲು ನಿಲ್ದಾಣದ ನಡುವೆ ನಡೆದಿದ್ದು.ಟಿಕೆಟ್ ಚೆಕ್ ಮಾಡಲು ಬಂದ ಟಿಸಿ ಮೇಲೆ ಮುಸುಕುಧಾರಿ ಯುವಕನೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆತನನ್ನು ರಕ್ಷಿಸಲು ಹೋದ ನಾಲ್ವರ ಮೇಲೂ ಮುಸುಕುಧಾರಿ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ್ದ.

     ಈ ವೇಳೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಗೀಡಾದ ಯುವಕ ದೇವರ್ಷಿ ವರ್ಮಾ (24). ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ವಿಜಿಲೆನ್ಸ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

    ಆರೋಪಿಯ ಬೆನ್ನತ್ತಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೆದ ಮತ್ತು ಖಾನಾಪುರ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಬೆಟ್ಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಆರೋಪಿಯ ರೇಖಾಚಿತ್ರ ಮತ್ತು ಪೊಟೊ ಬಿಡುಗಡೆಗೊಳಿಸಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap