ಉಡುಪಿ:
ಜಿಲ್ಲೆಯಲ್ಲಿ ಹಿಜಾಬ್ ಧರಿಸೋ ವಿವಾದ ತಾರಕಕ್ಕೇರಿದೆ. ಈ ಮೊದಲು 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನ ಒಳಗೆ ಬರೋದಕ್ಕೆ ಯತ್ನಿಸಿದಂತ ಸಂದರ್ಭದಲ್ಲಿ, ಅವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಇಂದು 20 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ, ಪೋಷಕರೊಂದಿಗೆ ಆಗಮಿಸಿದ್ದಾರೆ.
ಈ ಮೂಲಕ ಹಿಜಾಬ್ ವಿವಾದ ತಾರಕಕ್ಕೇರುವಂತೆ ಆಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಹೆಚ್ಚಾಗಿದೆ. ಇತ್ತೀಚಿಗೆ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಇಂದು 20 ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿ ಆಗಮಿಸಿದ್ದಾರೆ. ಅವರನ್ನು ಕಾಲೇಜಿನ ಗೇಟ್ ಬಳಿಯಲ್ಲೇ ತಡೆದಂತ ಪ್ರಾಂಶುಪಾಲರು, ಉಪನ್ಯಾಸಕರು, ಹಿಜಾಬ್ ಧರಿಸಿ ಬಂದ್ರೇ ಒಳಗೆ ಬಿಡೋದಿಲ್ಲ ಅಂತ ಹೇಳಿದ್ದಾರೆ.
ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯರ ಜೊತೆಗೆ ಪೋಷಕರು ಆಗಮಿಸಿದ್ದು, ಕಾಲೇಜಿಗೆ ಹಿಜಾಬ್ ಧರಿಸಿ ಪ್ರವೇಶಿಸೋದಕ್ಕೆ ಅವಕಾಶ ನೀಡಬೇಕು ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ರೇ ಮಧ್ಯಪ್ರವೇಶಿಸಿದಂತ ಪೊಲೀಸ್ ಅಧಿಕಾರಿ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ಮನವೊಲಿಕೆಯ ಪ್ರಯತ್ನ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ