ಉಡುಪಿ:
ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಯಕ್ಷಗಾನಕ್ಕೂ ಕಾಲಿಟ್ಟಿದ್ದು, ಜಿಲ್ಲೆಯ ಕಾರ್ಕಳ ಉತ್ಸವದಲ್ಲಿ ಆಯೋಜಿಸಲಾದ ಯಕ್ಷಗಾನದ ದೃಶ್ಯ ಸದ್ಯ ಭಾರೀ ವೈರಲ್ ಆಗುತ್ತಿದೆ.
ತೆಂಕುತಿಟ್ಟು ಯಕ್ಷಗಾನದ ಪ್ರಸಂಗವೊಂದರಲ್ಲಿ ಕೇಸರಿ ಶಾಲು ಹಾಕಿ ಕಲಾವಿದ ವಿಷಯ ಪ್ರಸ್ತಾಪಿಸಿದ್ದು, ಅಪ್ರತಿಮ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಅವರಿಂದ ವಿವಾದ ಕುರಿತು ವಿಶ್ಲೇಷಣೆ ಮಾಡಿದ್ದಾರೆ.
ಬೆಳ್ಳೂಡಿ ಶಾಖಾ ಮಠದಲ್ಲಿ ಐಎಎಸ್/ ಕೆಎಎಸ್ ತರಬೇತಿ ಕೇಂದ್ರ ಆರಂಭಿಸಲು ಪೂರ್ವ ಸಿದ್ಧತೆ
ವಿದ್ಯಾರ್ಥಿನಿಯರನ್ನು ಸೈನಿಕರಿಗೆ ಹೋಲಿಸಿ, ಹಿಜಾಬ್ ನ್ನು ಕಪ್ಪು ಬಟ್ಟೆಗೆ ಹೋಲಿಸಿ ಹಾಸ್ಯ ಮಾಡಲಾಗಿದ್ದು, ಇದಕ್ಕೆ ಪ್ರತಿಯಾಗಿ ಪ್ರಸ್ತುತ ವಿದ್ಯಮಾನಗಳ ಕುರಿತು ಯಕ್ಷಗಾನ ಪ್ರಸಂಗದಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರದರ್ಶನ ನೋಡುತ್ತಿದ್ದ ಯಕ್ಷಗಾನ ಪ್ರೇಕ್ಷಕರಿಂದ ಚಪ್ಪಾಳೆ ಸಿಳ್ಳೆಯ ಮೂಲಕ ಸ್ಪಂದಿಸಿದ್ದು, ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ, ಯಕ್ಷ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಕಾರ್ಕಳ ಉತ್ಸವದ ಈ ಹಾಸ್ಯದ ತುಣುಕು ಕರಾವಳಿಯಾದ್ಯಂತ ವೈರಲ್ ಆಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ