ಹಿಂದೂಗಳು ಯುಗಾದಿಯ ಹಬ್ಬದ ಸಮಯದಲ್ಲಿ ಹಲಾಲ್ ಮಾಂಸ, ಉತ್ಪನ್ನಗಳನ್ನು ಭಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು:

ಸಮಸ್ತ ಹಿಂದೂಗಳು ಯುಗಾದಿಯ ಹಬ್ಬದ ಸಮಯದಲ್ಲಿ ಹಲಾಲ್ ಮಾಂಸ ಹಲಾಲ್ ಉತ್ಪನ್ನಗಳನ್ನು ಭಹಿಷ್ಕಾರ ಮಾಡಿರಿ ಎಂಬುದಾಗಿ ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ. ಈ ಮೂಲಕ ಈಗ ಹಿಜಾಬ್, ವ್ಯಾಪಾರ ನಿಷೇಧ ಬಳಿ, ಹಲಾಲ್ ಮಾಂಸ ನಿಷೇಧದ ಸಮರ ಆರಂಭಗೊಂಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವಂತ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಅವರು, ಭಾರತದಲ್ಲಿ ಇಂದು ಎಲ್ಲ ಉತ್ಪನ್ನಗಳಲ್ಲಿ ಹಲಾಲ್ ಪ್ರಮಾಣಪತ್ರವನ್ನು ಪಡೆಯುವ ಇಸ್ಲಾಮಿಕ್ ಷಡ್ಯಂತ್ರ್ಯದ ಪದ್ದತಿಯು ಶುರುವಾಗಿದೆ. ಹಲಾಲ್ ಉತ್ಪನ್ನದ ಮೂಲಕ ಸಾವಿರಾರು ಕೋಟಿ ಹಣವನ್ನು ಜಿಹಾದಿ ಸಂಘಟನೆಗಳು, ಸಂಗ್ರಹ ಮಾಡಿ ಅದನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿರುವುದು ಗಮನಕ್ಕೆ ಬರುತ್ತದೆ ಎಂದಿದ್ದಾರೆ.

2023ರ ಚುನಾವಣಾ ಕದನ ಎದುರಿಸಲು ಬಿಜೆಪಿ ಬತ್ತಳಿಕೆಯಲ್ಲಿ ಅಸ್ತ್ರಗಳು ರೆಡಿ

ಭಯೋತ್ಫಾದನೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಭಯೋತ್ಫಾಧಕರಿಗೆ ಭಾರತದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಅವರಿಗೆ ಕಾನೂನು ಸಹಾಯ ಮಾಡುತ್ತೀವೆ. ಈ ಹಲಾಲ್ ಪ್ರಮಾಣಪತ್ರಕ್ಕೆ ಯಾವುದೇ ಕಾಯಿದೆಯ ಮಾನ್ಯತೆ ಇಲ್ಲ. ಇದು ಕಾನೂನು ಬಾಹಿರ ಪ್ರಮಾಣ ಪತ್ರವಾಗಿದೆ ಎಂದಿದ್ದಾರೆ.

ಜಾತ್ಯಾತೀತ ಸಂವಿಧಾನದಲ್ಲಿ ಮತ, ಜಾತಿಯ ಆಧಾರದ ಮೇಲೆ ಉತ್ಪತ್ನಕ್ಕೆ ಪ್ರಮಾಣಪತ್ರ ನೀಡುವುದು ಸಂವಿಧಾನಕ್ಕೆ ವಿರುದ್ದವಾಗಿದೆ. ಅಷ್ಟೇ ಅಲ್ಲದೇ ಇಸ್ಲಾಮ್ ಪದ್ದತಿಯ ಪ್ರಕಾರ ಈಗಾಗಲೇ ಅವರ ಮತದ ದೇವರಿಗೆ ಅರ್ಪಣೆ ಮಾಡಿರುವುದನ್ನು, ಪುನಃ ಹಿಂದೂಗಳು ಯುಗಾದಿಯ ದಿನ ಹಿಂದೂ ದೇವರಿಗೆ ಅರ್ಪಣೆ ಮಾಡುವುದು ಅಯೊಗ್ಯವಾಗಿದೆ.

ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ : ಡಿ.ಕೆ. ಶಿವಕುಮಾರ್

ಹಾಗಾಗಿ ಯಾವುದೇ ಕಾರಣಕ್ಕೂ ಹಿಂದೂಗಳು ಯುಗಾದಿಯ ಸಮಯದಲ್ಲಿ ಇರಬಹುದು, ಅನ್ಯ ಯಾವುದೇ ಸಮಯದಲ್ಲಿ ಹಲಾಲ್ ಮಾಂಸವನ್ನು ಬಳಸಬಾರದು & ಹಲಾಲ್ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು ಎಂದು ಸಮಿತಿಯು ಕರೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap