ಮುಸ್ಲಿಮರು ಆರ್ಥಿಕ ಬಹಿಷ್ಕಾರ ಹಾಕಿದರೆ ಹಿಂದೂಗಳಿಗೇ ತೊಂದರೆ; ಉಡುಪಿ ಮುಸ್ಲಿಂ ಮುಖಂಡರು

ಉಡುಪಿ:

ಉಡುಪಿ, ಮಾರ್ಚ್ 23: ಕರಾವಳಿಯ ದೇವಸ್ಥಾನಗಳ ಜಾತ್ರೋತ್ಸವದ ವೇಳೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಹಾಕಿರುವ ವಿಚಾರ ರಾಜ್ಯದಾದ್ಯಂತ ದೊಡ್ಡ ಚರ್ಚೆಯನ್ನು ಉಂಟು ಮಾಡಿದೆ.

ಮುಸ್ಲಿಂ ವ್ಯಾಪಾರಿಗಳ ಒಂದು ವರ್ಗ, ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ, ಹೊಟ್ಟೆಯ ಮೇಲೆ ಹೊಡಿಯಬೇಡಿ ಅಂತಾ ಮನವಿ ಮಾಡಿದರೆ, ಇನ್ನೊಂದೆಡೆ ಮುಸ್ಲಿಂ ಮುಖಂಡರು ಮಾತ್ರ ವ್ಯಾಪಾರ ಬಹಿಷ್ಕಾರ ಹಾಕಿದರೆ ಏನೂ ತೊಂದರೆ ಇಲ್ಲ.ಯಾವ ನಷ್ಟವೂ ಆಗುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಉಡುಪಿಯ ಮುಸ್ಲಿಂ ‌ಮುಖಂಡ ಅನ್ವರ್ ಅಲಿ, “ಆರ್ಥಿಕ ಬಹಿಷ್ಕಾರ ಹಾಕಿದರೆ ಮುಸ್ಲಿಂ ವ್ಯಾಪಾರಿಗಳಿಗೆ ಏನೂ ತೊಂದರೆ ಆಗಲ್ಲ. ಯಾರೂ ಒಂದು ದಿನದ ವ್ಯಾಪಾರ ನಂಬಿ ಕೂತಿಲ್ಲ, ಒಂದು ದಿನದ ವ್ಯಾಪಾರದಲ್ಲಿ ಜೀವನ ಹೋಗುವುದಿಲ್ಲ. ಮುಸ್ಲಿಮರು ಹಿಂದೂ ಅಂಗಡಿಗಳಿಗೆ ಹೋಗದಿದ್ದರೆ ಹಿಂದೂಗಳಿಗೇ ಹೆಚ್ಚು ನಷ್ಟ,” ಎಂದು ಅನ್ವರ್ ಅಲಿ ಹೇಳಿದ್ದಾರೆ.

ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ “ಕ್ಯುಆರ್‌ ಕೋಡ್‌’!

“ಕಾಪು ಮಾರಿಗುಡಿಯಲ್ಲಿ ಸುಗ್ಗಿ ಮಾರಿ ಜಾತ್ರೆ ಈವರೆಗೂ ವಿಜೃಂಭಣೆಯಿಂದ ನಡೆಯುತ್ತಿತ್ತು. ಪ್ರತೀ ವರ್ಷ ನಾವು ವ್ಯಾಪಾರ ನಡೆಸಿಕೊಂಡು ಬರುತ್ತಿದ್ದೆವು. ಈ ಬಾರಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಾಗಿದೆ. ಧಾರ್ಮಿಕ ದತ್ತಿ ಕಾನೂನು ಅಡಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಪ್ರಕಟಣೆ ಹೊರಡಿಸಲಾಗಿದೆ. ಮುಖ್ಯವಾಗಿ ಇದು ಸೌಹಾರ್ದದತೆಗೆ ಧಕ್ಕೆ ಬರುವ ಸಾಧ್ಯತೆ ‌ಇದೆ,” ಎಂದು ಅನ್ವರ್ ಅಲಿ ಹೇಳಿದ್ದಾರೆ‌.

ದೇಶದೆಲ್ಲೆಡೆ ಈ ಕುರಿತು ಚರ್ಚೆಯಾಗುತ್ತಿದ್ದರೂ ಈ ಭಾಗದ ಮುಸ್ಲಿಂ ಸಂಘಟನೆಗಳು, ಮುಖಂಡರು ಯಾವುದೇ ಪ್ರತಿಕ್ರಿಯ ಈವರೆಗೂ ಕೊಟ್ಟಿಲ್ಲ. ಯಾಕೆಂದರೆ ಇಸ್ಲಾಂನಲ್ಲಿ ಹುಟ್ಟಿಸಿದ ದೇವರು ಹುಲ್ಲು ‌ಮೇಯಿಸದೆ ಇರಲ್ಲ ಎನ್ನುವ ಮಾತಿದೆ. ಹೀಗಾಗಿ ನಾವು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಈ ಭಾಗದ ಹಿಂದೂಗಳೇ ಈ ಬಹಿಷ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದರು.

ಮುಸ್ಲಿಮರು ನಮ್ಮಲ್ಲಿ ಖರೀದಿಗೆ ಬರುವುದನ್ನು ನಿಲ್ಲಿಸಿದರೆ ಸಮಸ್ಯೆಯಾಗುತ್ತದೆ ಅಂತಾ ಹಿಂದೂ ವ್ಯಾಪಾರಿಗಳೇ ಹೇಳಿದ್ದಾರೆ. ನಮ್ಮಲ್ಲಿ ದೊಡ್ಡ ವ್ಯವಹಾರ ಮಾಡುವವರು ಮುಸ್ಲಿಮರು. ಹೀಗಾಗಿ ಇದು ಹಿಂದೂಗಳಿಗೆ ತಿರುಗುಬಾಣ ಆಗಲಿದೆ ಎನ್ನುವ ಅಭಿಪ್ರಾಯ ಹಿಂದೂ ವರ್ತಕರಿಂದ ಕೇಳಿಬಂದಿದೆ ಎಂದು ಅನ್ವರ್ ಅಲಿ ಹೇಳಿದ್ದಾರೆ.

ಈ‌ ಆರ್ಥಿಕ ಬಹಿಷ್ಕಾರದಿಂದ ಮುಸ್ಲಿಮರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಕಾಪು ಮಾರಿಗುಡಿ ಇಲ್ಲವಾದರೆ ಬೇರೆ ಸ್ಥಳದಲ್ಲಿ ವ್ಯಾಪಾರ ನಡೆಯುತ್ತದೆ. ಒಂದು‌ ದಿನದ ವ್ಯಾಪಾರದಲ್ಲಿ ಜೀವನ ಸಾಗುವುದಿಲ್ಲ. ಅಷ್ಟಕ್ಕೂ ವ್ಯಾಪಾರ ನಿಷೇಧ ಮಾಡಿದರೆ ಸ್ವಂತ ಅಂಗಡಿ ಇಟ್ಟುಕೊಳ್ಳುತ್ತೇವೆ. ಸ್ವಉದ್ಯೋಗ ಮಾಡುತ್ತೇವೆ ಎಂದು ತಿಳಿಸಿದರು.

ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್ ಮಹತ್ವದ ಆದೇಶ

ಇನ್ನು ಈ ಬಹಿಷ್ಕಾರ ಹಿಜಾಬ್ ಬಂದ್‌ಗೆ ಪ್ರತಿಕಾರನಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅನ್ವರ್ ಅಲಿ, ನ್ಯಾಯಾಲಯ ಹಿಜಾಬ್ ವಿಚಾರವಾಗಿ ನೀಡಿರುವ ತೀರ್ಪಿನ ಬಗ್ಗೆ ಗೌರವವಿದೆ. ಆದರೆ ಕುರಾನ್‌ನಲ್ಲಿ ಹಿಜಾಬ್ ಕಡ್ಡಾಯ ಅಲ್ಲ ಅನ್ನುವ ಅಭಿಪ್ರಾಯಕ್ಕೆ ಬಂದ್ ಮೂಲಕ ಬೇಸರ‌ ಹೊರಹಾಕಿದ್ದೇವೆ. ನಮ್ಮ ಬೇಸರಕ್ಕೆ ಪ್ರತಿಯಾಗಿ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿರುವುದು ಸರಿಯಲ್ಲ ಎಂದು ಮುಸ್ಲಿಂ ಮುಖಂಡ ಅನ್ವರ್ ಅಲಿ ಹೇಳಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap