ಏರೋ ಇಂಡಿಯಾ : ವಿವಾದಕ್ಕೆ ಕಾರಣವಾದ HLFT-42 ಯುದ್ಧ ವಿಮಾನ

 

ಬೆಂಗಳೂರು:

      ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಏರ್ ಶೋ ನಡೆಯುತ್ತಿದ್ದು, ಬಾನಂಗಳದಲ್ಲಿ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ, ಚಮತ್ಕಾರಗಳು ಕಣ್ಮನ ಸೆಳೆಯುವಂತಿದೆ. ಈ ವೇಳೆ HLFT-42 ಯುದ್ಧ ವಿಮಾನದ ಮೇಲೆ ಬಜರಂಗಬಲಿ ಫೋಟೊ ವಿವಾದಕ್ಕೆ ನಾಂದಿಹಾಡಿತ್ತು.

    HLFT-42 ಯುದ್ಧ ವಿಮಾನದ ಮೇಲೆ ಹನುಮನ ಫೋಟೋ ಹಾಕುವ ಮೂಲಕ ಮಾರುತ್ ಹೆಸರಿನ HLFT-42 ಯುದ್ಧ ವಿಮಾನವನ್ನು ಒಂದು ಧರ್ಮಕ್ಕೆ ಸೀಮಿತ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಎದ್ದ ವಿವಾದವನ್ನು ಫೋಟೋ ತೆಗೆದು ಹಾಕುವ ಮೂಲಕ ಶಮನ ಮಾಡುವ ಯತ್ನವನ್ನು ಹೆಚ್‌ ಎ ಎಲ್‌ ಮಾಡಿದೆ .

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೆಚ್.ಎ.ಎಲ್ ಎಂಡಿ, ಚೇರ್ಮನ್ ಅನಂತ ಕೃಷ್ಣನ್, ಹನುಮಾನ್ ಶಕ್ತಿಯ ಸಂಕೇತವೆಂದು ನಾವು HLFT-42 ಯುದ್ಧ ವಿಮಾನದ ಮೇಲೆ ಫೋಟೋ ಹಾಕಿದ್ದೆವು. ಹನುಮಾನ್ ಅಷ್ಟೇ ಶಕ್ತಿಯುತವಾದ ವಿಮಾನ ಎಂದು ಬಿಂಬಿಸುವ ನಿಟ್ಟಿನಲ್ಲಿ ಹಾಕಲಾಗಿತ್ತು. ಆದರೆ ಅದು ಅಪ್ರಸ್ತುತ ಎಂಬ ಕಾರಣಕ್ಕೆ ಫೋಟೋ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap