ಹೊಸದುರ್ಗ:
ಓ ದೇವರೇ ಮಾನವನನ್ನು ಕ್ಷಮಿಸಿ ದಯೆತೋರಿ ಮಳೆಯ ಸುರಿಸು ಎಂದು ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠದ್ಯಾಕ್ಷರಾದ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ನೀಡಿದರು.
ಅವರು ಇಂದು ಹೊಸದುರ್ಗ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ನಂದಿಬಸವೇಶ್ವರ ಶ್ರೀ ಈಶ್ವರ ದೇವಾಲಯಗಳ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಾ, ಮಾನವನ ಕೋರಿಕೆ ಸ್ವಾರ್ಥಕ್ಕೆ ಪ್ರಕೃತಿ ನಾಶ ಮಾಡಿದ್ದಾರೆ ಈಗ ಪ್ರಕೃತಿಯ ಅನಿವಾರ್ಯತೆ ನೀರಿನ ಬಳಕೆ ಮಾನವನಿಗೆ ತಿಳಿದಿದೆ. ಆ ಕಾರಣಕ್ಕೆ ದಯತೋರು ದೇವರು ಎಂದು ದೇವರಲ್ಲಿ ಪ್ರಾರ್ಥಿಸಿದರು.
ಇಂಥ ಬರಗಾಲದಲ್ಲೂ ಇಂದಿನ ಯುವ ಪೀಳಿಗೆ ಹಲವು ದುಷ್ಚಟಕ್ಕೆ ದಾಸರಾಗಿ ಪ್ರತಿನಿತ್ಯ 50 ರಿಂದ 200 ರೂಪಾಯಿ ಹಣ ಮಾಡಿ ಸ್ಟಾರ್ ಗುಟ್ಕಾ ಸರಾಯಿ ಇಸ್ಪೀಟ್ ಇನ್ನಿತರೆ ದುಶ್ಚಟಕ್ಕೆ ವ್ಯಯ ಮಾಡುತ್ತಿರುವುದು ಅತ್ಯಂತ ದುಃಖದ ಸಂಗತಿ. ಅದೇ ಹಣವನ್ನು ನಮ್ಮೂರಿನ ಕೆರೆಗೆ ಹೊಲದ ಬದುವಿಗೆ ಮರ ಹಾಕಲಿಕ್ಕೆ ಬಳಸಿದರೆ ನಮ್ಮನ್ನು ಕಾಪಾಡುತ್ತವೆ ಯುವ ಪೀಳಿಗೆ ಎಚ್ಚೆತ್ತು ದುರಭ್ಯಾಸದಿಂದ ಹೊರಬಂದು ಗ್ರಾಮೀಣ ಪ್ರದೇಶದಲ್ಲಿ ಕೆರೆ ಕಟ್ಟೆ ಮರ ಗಿಡಗಳನ್ನು ನೆಡುವ ಬೆಳೆಸುವ ಕಡೆಗೆ ಹೆಚ್ಚು ಒತ್ತನ್ನು ನೀಡಿದಲ್ಲಿ ಅಸಮತೋಲನವಾಗಿರುವ ಪ್ರಕೃತಿಯನ್ನು ಸಮತೋಲನ ಸ್ಥಿತಿಗೆ ತರಲು ಸಾಧ್ಯವಿದೆ. ದೇವಸ್ಥಾನಗಳು ಊರಿಗೆ ಒಂದು ಅಥವಾ ಎರಡು ಇದ್ದರೆ ಉತ್ತಮ.
ಸಮೃದ್ಧಿಯಾಗಿ ಮಳೆಯಾಗಿ ಬೆಳೆ ಬಂದು ರೈತ ಸಂತೃಪ್ತಿ ಆಗುವವರೆಗೂ ಎಲ್ಲ ಮಠ, ಸಂಘ-ಸಂಸ್ಥೆಗಳು ಸ್ವಯಂ ನೀತಿ ಸಂಹಿತೆ ಹಾಕಿಕೊಳ್ಳಬೇಕು ಮತ್ತು ದುಂದುವೆಚ್ಚಕ್ಕೆ ಅದ್ದೂರಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿ ಕೊಳ್ಳುವ ಅಗತ್ಯತೆ ಇದೆ ಎಂದು ಕಿವಿಮಾತು ಹೇಳಿದರು
ವೇದಿಕೆಯಲ್ಲಿ ಬೆಂಗಳೂರಿನ ಉದ್ಯಮಿ ಪ್ರಭಾಕರ್ ರೆಡ್ಡಿಯನ್ನು ಸನ್ಮಾನಿಸಲಾಯಿತು. ಶಿವಣ್ಣ. ಕರವೆ ಅಧ್ಯಕ್ಷ ಲೋಕೇಶ್ ಕೋಡಿಹಳ್ಳಿ ವೆಂಕಟೇಶ್ ಚಂದ್ರಪ್ಪ, ಮಂಜುನಾಥ್. ಹಾಗೂ ದೇವಸ್ಥಾನಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ