ನಿಮ್ಮ ಸ್ಮಾರ್ಟ್‌ ಫೋನ್‌ ಬಗ್ಗೆ ನಿಮಗೆಷ್ಟು ಗೊತ್ತು…?

ನವದೆಹಲಿ:

   ನೀವು ನಿಮ್ಮ ಸೆಲ್ ಫೋನ್‌ಗಳನ್ನು   ಯಾವತ್ತಾದರೂ ಸೂಕ್ಷ್ಮವಾಗಿ ಪರಿಶೀಲಿಸಿದ್ದೀರಾ ? ಅದರ ಮೇಲ್ಭಾಗ, ಕೆಳಭಾಗದಲ್ಲಿರುವ ವ್ಯತ್ಯಾಸವನ್ನು ಗಮನಿಸಿದ್ದೀರಾ? ಬಹುತೇಕ ಎಲ್ಲ ಸೆಲ್ ಫೋನ್‌ಗಳಲ್ಲಿ ಸಣ್ಣ ಸಣ್ಣ ರಂಧ್ರಗಳಿರುವುದನ್ನು   ಗಮನಿಸಿರಬಹುದು. ಇದು ಯಾಕೆ ಎಂಬುದು ಗೊತ್ತಿದೆಯೇ?

  ಪ್ರಸ್ತುತ ಎಲ್ಲರ ಬಳಿಯೂ ಸೆಲ್ ಫೋನ್‌ಗಳಿರುತ್ತವೆ. ಅಸಂಖ್ಯಾತ ಗ್ರಾಹಕರಿಗೆ ವಿವಿಧ ರೀತಿಯ ಆಯ್ಕೆಯನ್ನು ನೀಡುವ ಆಂಡ್ರಾಯ್ಡ್ ಫೋನ್‌ಗಳು   ಒಂದಕ್ಕಿಂತ ಒಂದು ಸಣ್ಣ ಮಾದರಿಯಲ್ಲಾದರೂ ಬದಲಾವಣೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಎಲ್ಲ ಸೆಲ್ ಫೋನ್‌ಗಳ ಕೆಳ ಅಥವಾ ಮೇಲ್ಭಾಗದಲ್ಲಿ ಇಯರ್‌ಫೋನ್ ಜ್ಯಾಕ್ ಅನ್ನು ಇರಿಸಲಾಗಿರುತ್ತದೆ. ಇದರ ಬಳಿ ಅನೇಕ ಸಣ್ಣಸಣ್ಣ ರಂಧ್ರಗಳಿರುತ್ತವೆ. ಇದು ಯಾಕೆ ಎನ್ನುವುದನ್ನು ಬಹುತೇಕ ಯಾರೂ ಯೋಚಿಸಿರಲಿಕ್ಕಿಲ್ಲ.

   ಸೆಲ್ ಫೋನ್‌ಗಳಲ್ಲಿರುವ ಈ ಸಣ್ಣ ರಂಧ್ರಗಳು ಸಂದೇಶವನ್ನು ಕಳುಹಿಸಲು ಅನುಮತಿಸುವ ಘಟಕವಾಗಿದೆ. ಫೋನ್‌ನ ಮೇಲ್ಭಾಗ ಮತ್ತು ಕೆಳಭಾಗದಲ್ಲಿರುವ ರಂಧ್ರಗಳು ಸಿಗ್ನಲ್‌ಗಳನ್ನು ತೋರಿಸುತ್ತವೆ. ಇದು ಸಂದೇಶ, ಕರೆಗಳನ್ನು ಸ್ವೀಕರಿಸುವ, ಕಳುಹಿಸುವ ಕೆಲಸವನ್ನು ಮಾಡುತ್ತದೆ. ಫೋನ್ ರಿಂಗ್ ಆಗುವುದು ಸ್ಪೀಕರ್‌ನಿಂದ ಅಲ್ಲ.

  ಮೊಬೈಲ್ ಫೋನ್‌ಗಳ ಮೇಲ್ಭಾಗದಲ್ಲಿರುವ ರಂಧ್ರವು ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲದೆ ಸಿಗ್ನಲ್ ಮೂಲಕ ಕರೆಗಳ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ.

   ಕೆಳ ಭಾಗದಲ್ಲಿರುವ ರಂಧ್ರವು ಮೈಕ್ರೊಫೋನ್ ಆಗಿ ಕಾರ್ಯನಿರ್ವಹಿಸುತ್ತದೆ. ಕರೆ ಬಂದಾಗ ಅಥವಾ ಕರೆ ಮಾಡುವಾಗ ಅವು ಸ್ವಯಂಚಾಲಿತವಾಗಿ ಆನ್ ಆಗುತ್ತವೆ. ಇದರಿಂದಾಗಿಯೇ ನಾವು ಮಾತಾನಾಡುವ ಶಬ್ಧ ಆ ಕಡೆ ಇರುವವರಿಗೆ ಕೇಳುತ್ತದೆ. ನಾವು ಇನ್ನೊಬ್ಬರಿಗೆ ಕಾಲ್ ಮಾಡಿದಾಗ ನಮ್ಮ ಫೋನ್​ನಲ್ಲಿ ಮೈಕ್ರೋಫೋನ್​ ಕಾರ್ಯನಿರ್ವಹಿಸುತ್ತದೆ. ಆದರೆ ನಾವು ಮಾತನಾಡುವ ಶಬ್ಧ ಸ್ಪಷ್ಟವಾಗಿ ಕೇಳುವಂತೆ ಈ ಸಣ್ಣ ರಂಧ್ರ ಕೆಲಸ ಮಾಡುತ್ತದೆ.

   ನಮ್ಮ ಸುತ್ತಮುತ್ತ ಎಷ್ಟೇ ಶಬ್ದವಿದ್ದರೂ ಸಹ ಎಲ್ಲಾ ರೀತಿಯ ಶಬ್ದವನ್ನು ಅದು ಪಡೆಯುವುದಿಲ್ಲ. ಸ್ಮಾರ್ಟ್​​ಫೋನ್‌ನ ಕೆಳಭಾಗದಲ್ಲಿರುವ ಈ ರಂಧ್ರವು ಬೇರೆ ಶಬ್ದವನ್ನು ಹೀರಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಹೀಗಾಗಿ ನಮ್ಮ ಮಾತುಗಳು ಆ ರಂಧ್ರಕ್ಕೆ ಸರಿಯಾಗಿ ಕೇಳುತ್ತದೆ. ಆದ್ದರಿಂದ ಇದು ನಮ್ಮ ಧ್ವನಿಯನ್ನು ಸ್ಪಷ್ಟವಾಗಿ ಆ ಕಡೆಯಲ್ಲಿರುವವರಿಗೆ ಕೇಳುವಂತೆ ಮಾಡುತ್ತದೆ. 

   ಮೊಬೈಲ್ ನಲ್ಲಿರುವ ಈ ಸಣ್ಣ ರಂಧ್ರಗಳಿರುವ ಜಾಗವು ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಹೀಗಾಗಿ ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ ಮತ್ತು ಇದರೊಳಗೆ ಯಾವುದೇ ಪಿನ್ ಗಳನ್ನು ಹಾಕಬಾರದು.

Recent Articles

spot_img

Related Stories

Share via
Copy link
Powered by Social Snap